ನವದೆಹಲಿ, ಆ 20 (DaijiworldNews/PY): ಸುಮಾರು 10,000 ಅರೆಸೈನಿಕ ಪಡೆಗಳ ಸಿಬ್ಬಂದಿಯನ್ನು ಜಮ್ಮು-ಕಾಶ್ಮೀರದಿಂದ ಕೂಡಲೇ ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರ ಬುಧವಾರ ಆದೇಶದಲ್ಲಿ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಕ್ಷಣದಿಂದ ಜಾರಿಗೆ ಬರುವಂತೆ 100 ಸಿಎಪಿಎಫ್ ತುಕಡಿಗಳನ್ನು ಹಿಂಪಡೆಯಲು ಹಾಗೂ ಆಯಾ ಸ್ಥಳಗಳಿಗೆ ಹಿಂತಿರುಗಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಕಳೆದ ಆಗಸ್ಟ್ನಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿಯಾಗಿ ಸೇನಾಪಡೆಗಳನ್ನು ನಿಯೋಜನೆ ಮಾಡಲಾಗಿತ್ತು.
ಆದೇಶದ ಪ್ರಕಾರ, 10,000 ಸಾವಿರ ಸಿಬ್ಬಂದಿಗಳು ಜಮ್ಮು-ಕಾಶ್ಮೀರಕ್ಕೆ ನಿಯೋಜನೆಗೊಳ್ಳುವ ಮುನ್ನ ಈ ಹಿಂದೆ ಎಲ್ಲಿ ನಿಯೋಜನೆಗೊಂಡಿದ್ದರೋ ಅಲ್ಲಿಗೆ ತೆರಳುತ್ತವೆ. ಸೀಮಾ ಬಲ, ಸಿಆರ್ಪಿಎಫ್, ಬಿಎಸ್ಎಫ್, ಅಸ್ಸಾಂ ರೈಫಲ್ಸ್ ಸೇರಿದಂತೆ ಸಿಐಎಸ್ಎಫ್ ಹಾಗೂ ವಿವಿಧ ಪ್ಯಾರಾಮಿಲಿಟರಿ ಪಡೆಗಳಿಗೆ ಸೇರಿರುವ ವಿವಿಧ ಬೆಟಾಲಿಯನ್ಗಳ ಪೈಕಿ ಕರ್ತವ್ಯ ನಿರ್ವಹಿಸುತ್ತಿದ್ದ 10,000 ಸಿಬ್ಬಂದಿಗಳು ಜಮ್ಮು-ಕಾಶ್ಮೀರದಿಂದ ತೆರಳಲಿದ್ದಾರೆ.
40 ಕೇಂದ್ರ ಮೀಸಲು ಪಡೆ ಹಾಗೂ ತಲಾ 20 ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಈ ಹಿಂದೆ ನಿಯೋಜಿಸಲ್ಪಟ್ಟಲ್ಲಿಗೆ ವಾಪಾಸ್ಸಾಗಲಿದ್ದಾರೆ.