ನವದೆಹಲಿ, ಆ 20 (DaijiworldNews/PY): ದೇಶೀಯವಾಗಿ ಅಭಿವೃದ್ದಿಪಡಿಸಿರುವ ಎರಡು ಕೊರೊನಾ ಲಸಿಕೆಗಳ ಎರಡು ಕ್ಲಿನಿಕಲ್ ಪ್ರಯೋಗವು ಬಹುತೇಕ ಪೂರ್ಣಗೊಂಡಿದ್ದು, ಕೇಂದ್ರ ತೀರ್ಮಾನಿಸಿದರೆ ಲಸಿಕೆಯ ತುರ್ತು ಅನುಮೋದನೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಐಸಿಎಂಆರ್ನ ಉನ್ನತ ಅಧಿಕಾರಿಯೊಬ್ಬರು ಸಂಸದೀಯ ಸಮಿತಿಯೊಂದಕ್ಕೆ ತಿಳಿಸಿದ್ದಾರೆ.
ಭಾರತ್ ಬಯೋಟೆಕ್, ಝೈಡಸ್ ಕ್ಯಾಡಿಲಾ ಹಾಗೂ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಳಡಿಯಾ ಅಭಿವೃದ್ದಿಪಡಿಸಿದ ಲಸಿಕೆಯ ಕ್ಲಿನಿಕಲ್ ಪ್ರಯೋಗವು ವಿವಿಧ ಹಂತಗಳಲ್ಲಿವೆ ಎಂದು ಐಸಿಎಂಆರ್ನ ಮಹಾನಿದೇರ್ಶಕ ಗೃಹ ವ್ಯವಾಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.
ಭಾರತ್ ಬಯೋಟೆಕ್ ಹಾಗೂ ಝೈಡಸ್ ಕ್ಯಾಡಿಲಾ ಸಂಯೋಜಿಸಿದ ಕೊರೊನಾ ಲಸಿಕೆಯ ಎರಡು ಪ್ರಯೋಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನಿರ್ವಹಿಸುತ್ತಿರುವ ಹಾಗೂ ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಅಭಿವೃದ್ದಿಪಡಿಸುತ್ತಿರುವ ಲಸಿಕೆಯು ವಾರಾಂತ್ಯದಲ್ಲಿ ಹಂತ -2 (ಬಿ) ಪ್ರಯೋಗಗಳನ್ನು ಪ್ರವೇಶಿಸಲಿದ್ದು, ಇದಕ್ಕಾಗಿ ದೇಶದ 17 ಕೇಂದ್ರಗಳಲ್ಲಿ 1,700 ರೋಗಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಅಂತಿಮ ಪ್ರಯೋಗಳಿಗೆ ಆರರಿಂದ ಒಂಭತ್ತು ತಿಂಗಳುಗಳು ಬೇಕಾಗುತ್ತದೆ. ಆದರೆ, ಕೇಂದ್ರ ತೀರ್ಮಾನಿಸಿದರೆ ಶೀಘ್ರವೇ ಅನುಮೋದನೆ ಪಡೆಯಬಹುದಾಗಿದೆ ಎಂದರು.