ಬೆಂಗಳೂರು, ಆ 20 (DaijiworldNews/PY): ಇಂದು ಸಿಎಂ ಬಿಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯ ಗಭೆ ಪ್ರಕರಣದ ಬಗ್ಗೆ ಚರ್ಚಿಸಲಿದ್ದು, ಪಿಎಫ್ಐ ನಿಷೇಧದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇವೆ ಎನ್ನಲಾಗುತ್ತಿದೆ.
ಇಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ಇದರೊಂದಿಗೆ ಎಸ್ಡಿಪಿಐ ಸಂಘಟನೆಯ ನಿಷೇಧದ ಬಗ್ಗೆ ಚರ್ಚೆಯಾಗಲಿದೆ ಎನ್ನಲಾಗಿದೆ.
ಕೆಲವು ಸುಗ್ರೀವಾಜ್ಞೆಗಳಾಗಿ ಪರಿಚಯಿಸಲ್ಪಟ್ಟ ಕನಿಷ್ಠ 12 ಕಾಯ್ದೆಗಳಿಗೆ ಬದಲಾವಣೆಗಳನ್ನು ಅನುಮೋದಿಸಲು ಸಂಪುಟವು ನಿರ್ಧರಿಸಿದೆ. ಅಲ್ಲದೇ, ಸೆಪ್ಟೆಂಬರ್ನಲ್ಲಿ ಮುಂಗಾರು ಅಧಿವೇಶನ ನಡೆಸಲು ಸಿದ್ದವಾಗಿರುವ ಸರ್ಕಾರ ಈ ವಿಚಾರವಾಗಿಯೂ ಕೂಡಾ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿಧಾನ ಮಂಡಲ ಅಧಿವೇಶನ ಕಲಾಪವು 5 ದಿನಗಳ ಕಾಲ ನಡೆಯವ ಪ್ರಸ್ತಾಪವಿದೆ. ಈ ಬಗ್ಗೆ ಸ್ಥಳ ಸೇರಿದಂತೆ ದಿನಾಂಕ ಹಾಗೂ ಎಲ್ಲಾ ಮಾಹಿತಿಗಳ ಬಗ್ಗೆ ಚರ್ಚೆಯಾಗಲಿದ್ದು, ಅಂತಿಮವಾದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.