ಹೈದರಾಬಾದ್, ಆ 20 (DaijiworldNews/PY): ಮಗಳ ನಗ್ನ ಫೋಟೋಗಳನ್ನು ಮಲ ತಂದೆ ಲ್ಯಾಪ್ಟಾಪ್ನಲ್ಲಿ ಸೇವ್ ಮಾಡಿಟ್ಟುಕೊಂಡಿರುವ ಆರೋಪದ ಹಿನ್ನೆಲೆ ಆತನನ್ನು ನಾಚಾರಾಮ್ ಪೊಲೀಸರು ಬಂಧಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಆರೋಪಿಯನ್ನು ರೆಸ್ಟೋರೆಂಟ್ ಮಾಲೀಕ ರಾಜೇಶ್ (40) ಎಂದು ಗುರುತಿಸಲಾಗಿದೆ.
ತನ್ನ ಮಗಳು ಅಪ್ರಾಪ್ತೆಯಾಗಿದ್ದ ವೇಳೆ ಆರೋಪಿ ಆಕೆಯ ನಗ್ನ ಫೋಟೋಗಳನ್ನು ತೆಗೆದಿದ್ದು, ತನ್ನ ಲ್ಯಾಪ್ಟಾಪ್ನಲ್ಲಿ ಸೇವ್ ಮಾಡಿಟ್ಟಿದ್ದ. ಈಗ ಸಂತ್ರಸ್ತೆಗೆ 20 ವರ್ಷ ವಯಸ್ಸಾಗಿರುವ ಆಕೆ ಕಾನೂನು ವಿದ್ಯಾರ್ಥಿಯಾಗಿದ್ದಾಳೆ. ಸಂತ್ರಸ್ತೆಯ ತಾಯಿ ಆರೋಪಿ ರಾಜೇಶ್ನ ಎರಡನೇ ಹೆಂಡತಿ.
ಜುಲೈ ತಿಂಗಳಿನಲ್ಲಿ ಆಕೆ ತನ್ನ ತಂದೆಯ ಲ್ಯಾಪ್ಟಾಪ್ ಬಳಸುತ್ತಿದ್ದ ಸಂದರ್ಭ ತನ್ನದೇ ನಗ್ನ ಫೋಟೋಗಳನ್ನು ನೋಡಿದ್ದಾಳೆ. ಈ ಫೋಟೋಗಳನ್ನು ತೆಗೆದಾಗ ಆಕೆಗೆ 14 ಅಥವಾ 15 ವರ್ಷದವಳಾಗಿದ್ದಳು ಎಂದು ನಾಚಾರಾಮ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ಹೇಳಿದ್ದಾರೆ.
ಯುವತಿ ಲ್ಯಾಪ್ಟಾಪ್ನಲ್ಲಿ ತನ್ನ ನಗ್ನ ಪೋಟೋಗಳಿರುವ ಬಗ್ಗೆ ತಾಯಿಗೆ ತಿಳಿಸಿದ್ದು, ನಂತರ ತಾಯಿ ಹಾಗೂ ಮಗಳು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಬಗ್ಗೆ ಜು.29ರಂದು ದೂರು ದಾಖಲಾಗಿದೆ.
ಮೊದಲೇ ಆರೋಪಿ ರಾಜೇಶ್ ಅನ್ನು ಬಂಧಿಸಿದ್ದು, ಆತನಿಗೆ ಕೊರೊನಾ ಪಾಸಿಟಿವ್ ಇದ್ದ ಕಾರಣ ಆತ ಚೇತರಿಸಿಕೊಂಡ ನಂತರ ಸೋಮವಾರ ಆತನನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಲ್ಕಜ್ಗಿರಿ ಎಸಿಪಿ ನರಸಿಂಹ ರೆಡ್ಡಿ ಹೇಳಿದ್ದಾರೆ.
ಆರೋಪಿಯ ವಿರುದ್ದ ಪೊಕ್ಸೊ ಹಾಗೂ ಇತರೆ ಐಪಿಸಿ ಸಿಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಅಲ್ಲದೇ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.