ನವದೆಹಲಿ, ಆ. 20(DaijiworldNews/HR): ಭಾರತದೆಲ್ಲೆಡೆ ಇಮೇಲ್ ಸೇವೆ ಒದಗಿಸುವ ಗೂಗಲ್ನ ಜಿಮೇಲ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಸಂದೇಶ ಕಳುಹಿಸಲು ಬಳಕೆದಾರರಿಕೆ ಸಾಧ್ಯವಾಗದ ಕಾರಣ ಗೂಗಲ್ ಕಂಪೆನಿ ಜಿಮೇಲ್ ಡೌನ್ ಆಗಿರುವುದನ್ನು ಖಚಿತಪಡಿಸಿದ್ದು ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸುವುದಾಗಿ ತಿಳಿಸಿದೆ.
ಇಂದು ಬೆಳಗ್ಗೆ 11 ಗಂಟೆಯಿಂದ ಭಾರತದಲ್ಲಿಈ ಸಮಸ್ಯೆ ಉಂಟಾಗಿದ್ದು, ಜಿಮೇಲ್ನಲ್ಲಿ ಯಾವುದೇ ಪೋಟೊಗಳು, ವಿಡಿಯೊಗಳು ಹಾಗೂ ಫೈಲ್ಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಜಿಮೇಲ್ನ ವೈಯಕ್ತಿಕ ಖಾತೆಗಳಲ್ಲಿ ಕೂಡ ದೊಡ್ಡ ದೊಡ್ಡ ಸಂದೇಶಗಳನ್ನು ಕಳಹಿಸಲು ಆಗುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.
ಭಾರತ ಮಾತ್ರವಲ್ಲದೆ ಏಷ್ಯಾ, ಯುರೋಪ್ ಹಾಗೂ ಅಮೆರಿಕ ಖಂಡದ ಹಲವು ದೇಶಗಳಲ್ಲಿ ಈ ಸಮಸ್ಯೆ ಉಂಟಾಗಿದೆ.
ಇನ್ನೊಂದೆಡೆ ಜಿಸ್ಯೂಟ್ ಸೇರಿದಂತೆ, ಗೂಗಲ್ ಡ್ರೈವ್ ಸೇವೆಯಲ್ಲೂ ಈ ಸಮಸ್ಯೆಯಾಗಿದ್ದು, ಯಾವುದೇ ಮಾಹಿತಿ, ಪೋಟೊ, ವಿಡಿಯೊಗಳನ್ನು ಅಪ್ಲೋಡ್ ಮಾಡಲು ಮತ್ತು ಡೌನ್ಲೋಡ್ ಮಾಡಲು ಆಗುತ್ತಿಲ್ಲ ಎಂದು ಬಳಕೆದಾರರು ತಿಳಿಸಿದ್ದಾರೆ.
ಜಿಮೇಲ್ ಸೇವೆಯಲ್ಲಿ ತೊಂದರೆಯಾಗಿರುವುದರ ಬಗ್ಗೆ ಗೂಗಲ್ ಕಂಪನಿ ಜಿಸ್ಯೂಟ್ ಡ್ಯಾಶ್ ಬೋರ್ಡ್ನಲ್ಲಿ ಪ್ರಕಟಿಸಿದ್ದು, ಈ ಸಮಸ್ಯೆ ಬಗ್ಗೆ ತಂತ್ರಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.