ಮೈಸೂರು, ಆ. 20(DaijiworldNews/HR): ರಾಜ್ಯದ ಎಲ್ಲಿ ನಡೆದ ಗಲಭೆಯಲ್ಲೂ ಶಾಸಕ ಜಮೀರ್ ಅಹಮದ್ ಖಾನ್ ಯಾಕೆ ಹಾಜರಿರುತ್ತಾರೆ. ಅದನ್ನು ನಿಯಂತ್ರಿಸಲು ಕಾಂಗ್ರೆಸ್ ಗೆ ಏಕೆ ಆಗುತ್ತಿಲ್ಲ. ಜಮಿರ್ ಅಹಮದ್ ಅವರು ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಕೆ ಜಿ ಹಳ್ಳಿ ಡಿ ಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ್ ಅವರು ಪುಂಡ ಮುಸಲ್ಮಾನ ಗಲಭೆಕೋರರ ಹೆಸರು ಹೇಳದಂತೆ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿದ್ದಾರೆ.
ಉಗ್ರರು ರಾಜ್ಯದ ಉಗ್ರರು ಹುಣಸೂರು, ಮೈಸೂರಿನಲ್ಲಿ ಇದ್ದಾರೆ. ಕೇರಳದಂತೆ ರಾಜಕೀಯ ಹತ್ಯೆ ನಡೆಸಲು ಎಸ್ಡಿಪಿಐ, ಕೆಎಫ್ಡಿ ರಾಜ್ಯಕ್ಕೆ ಕಾಲಿಟ್ಟಿದ್ದು, ಕಾಂಗ್ರೆಸ್ ನವರು ಇದನ್ನು ಕಿತ್ತು ಹಾಕುವ ಬದಲು ಪೋಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪ ಮಾಡಿದ್ದಾರೆ.