ಲಖನೌ, ಆ 21 (DaijiworldNews/PY): ವಿಧಾನ ಸಭೆಯ ಪ್ರಸಕ್ತ ಅಧಿವೇಶನದಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಶೇಷ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸದನದಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಶೇಷ ವಿಷಯಗಳ ಬಗ್ಗೆ ಗಮನವಹಿಸಬೇಕು. ಸರ್ಕಾರ ಹಾಗೂ ಆಡಳಿತವನ್ನು ಜವಾಬ್ದಾರಿಯುತವಾಗಿಸಬೇಕು. ಇದು ನಾನು ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರಿಗೆ ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿಯ ವಿಷಯವು ಸರ್ಕಾರದ ಕಾರ್ಯಸೂಚಿಯಿಂದ ಕಾಣೆಯಾಗಿದ್ದರೂ, ದಲಿತರು, ಮುಸ್ಲಿಮರು ಮತ್ತು ಬ್ರಾಹ್ಮಣ ಸಮಾಜ, ಸ್ತ್ರೀ ದಬ್ಬಾಳಿಕೆ, ದ್ವೇಷ, ದೌರ್ಜನ್ಯಗಳ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಬೇಕು. ಯುಪಿಯಲ್ಲಿ ಕಾನೂನು ಹಾಗೂ ಸುವ್ಯಸ್ಥೆಯು ಹದಗೆಡುತ್ತಿದೆ. ಇದನ್ನು ಸರಿಯಾದ ಮಾರ್ಗಕ್ಕೆ ತರುವಂತ ಕಾರ್ಯವಹಿಸೋಣ ಎಂದಿದ್ದಾರೆ.