ನವದೆಹಲಿ, ಆ. 21 (DaijiworldNews/HR): ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಸಂಧರ್ಭದಲ್ಲಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಅವರ ವಿರುದ್ಧದ ವಿಚಾರಣೆ ನಡೆಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ 2018 ರಲ್ಲಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು , ಗೊಗೊಯ್ ನಿವೃತ್ತಿಯಾಗಿದ್ದರಿಂದ ಪೆಟಿಟಾನ್ ನಿರುಪಯುಕ್ತವಾಗಿದೆ ಎಂದು ಇಂದು ಹೇಳಿದೆ.
ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ವಿರುದ್ಧ ನ್ಯಾಯಾಧೀಶರ ಸಮಿತಿಯು 2016 ಜುಲೈನಲ್ಲಿ ಎಕ್ಸ್ ಪಾರ್ಟ್ ಆದೇಶವನ್ನು ಅಂಗೀಕರಿಸುವಲ್ಲಿ ಪಕ್ಷಪಾತ ಮತ್ತು ಅನುಚಿತ ವರ್ತನೆಗಾಗಿ ಆಂತರಿಕ ವಿಚಾರಣೆಗೆ ಕೋರಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಗೊಗೊಯ್ ಅವರು ಅಕ್ಟೋಬರ್ 3, 2018 ರಂದು 46 ನೇ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಿ 13 ತಿಂಗಳಿಗಿಂತ ಕಡಿಮೆ ಅವಧಿಯ ಅಧಿಕಾರವಧಿಯನ್ನು ಹೊಂದಿದ್ದರು.