ಮುರ್ಶಿದಾಬಾದ್, ಆ. 21 (DaijiworldNews/HR): ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಕೇರಂ ಆಡುವುದು, ಸಂಗೀತ ಕೇಳುವುದು, ಟಿ.ವಿ ನೋಡಬಾರದೆಂಬ ಕಾನೂನನ್ನು ಜಾರಿಗೊಳಿಸಲಾಗಿದೆ.
ಈ ಕಾನೂನನ್ನು ಜಾರಿಗೆತಂದಿರುವುದು ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತ ಬಾಹುಳ್ಯವಿರುವ ಸಮುದಾಯದ ಮುಖ್ಯಸ್ಥರು.
ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಮುರ್ಶಿದಾಬಾದ್ ಜಿಲ್ಲೆಯಲ್ಲಿ ಕೆಲವೊಂದು ಚಟುವಟಿಕೆಗಳ ಮೇಲೆ ನಿಷೇಧ ವಿಧಿಸಿದ್ದಾರೆ(ಫತ್ವಾ), ಅದರ ಪೈಕಿ ಟಿ.ವಿ ನೋಡುವುದು, ಸಂಗೀತ ಕೇಳುವುದು, ಲಾಟರಿ ಟಿಕೆಟ್ ಮಾರಾಟ, ಮಧ್ಯ ಮಾರಾಟ, ಕ್ಯಾರಮ್ ಆಡುವುದೂ ಕೂಡ ಸೇರ್ಪಡೆಯಾಗಿದೆ. ಒಂದು ವೇಳೆ ಈ ಫತ್ವಾವನ್ನು ಉಲ್ಲಂಘನೆ ಮಾಡಿದವರು 500 ರೂಪಾಯಿಗಳಿಂದ 7,000 ರೂಪಾಯಿಗಳ ವರೆಗೆ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಇನ್ನು ಈ ಫತ್ವಾ ವನ್ನು ಸಾಮಾಜಿಕ ಸುಧಾರಣಾ ಸಮಿತಿಯ ಬ್ಯಾನರ್ ನ ಅಡಿಯಲ್ಲಿ ಹೊರಡಿಸಲಾಗಿದ್ದು, ಈ ಆದೇಶವನ್ನೂ ಮೀರಿ ನಡೆದರೆ ಸಂಗೀತ ಕೇಳಿದರೆ 1,000 ರೂಪಾಯಿ ದಂಡ, ಕೇರಮ್ ಆಡಿದರೆ 500 ರೂಪಾಯಿ, ಲಾಟರಿ ಖರೀದಿಸಿದರೆ 2,000 ರೂಪಾಯಿ, ಮತ್ತು ಮದ್ಯ ಮಾರಾಟ ಮಾಡಿದರೆ, 7,000 ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.
ಯುವ ಪೀಳಿಗೆಯನ್ನು ಸಂಸ್ಕೃತಿ ಮತ್ತು ನೈತಿಕ ಅಧಃಪತನದತ್ತ ಕೊಂಡೊಯ್ಯುವುದನ್ನು ತಪ್ಪಿಸಲು ಈ ರೀತಿಯ ಈ ಕಾನೂನನ್ನು ವಿಧಿಸಲಾಗಿದೆ.