ನವದೆಹಲಿ, ಆ. 22(DaijiworldNews/HR): ಲಡಾಖ್ನಲ್ಲಿ ಗಡಿ ವಿವಾದದ ಬಳಿಕ ಚೀನಾಗೆ ಭಾರತ ಒಂದಲ್ಲ ಒಂದು ರೀತಿಯಲ್ಲಿ ಪಾಠ ಕಲಿಸುವ ಉದ್ದೇಶದಿಂದ ಸ್ವಾವಲಂಬಿ ಭಾರತದ ಅಭಿಯಾನ ಆರಂಭಿಸಿದ್ದು, ಪಾಕ್ ಮತ್ತು ಚೀನಾ ಜೊತೆಗಿನ ಎಲ್ಲ ಒಪ್ಪಂದಗಳನ್ನು ರದ್ದುಗೊಳಿಸಿ, ಇದೀಗ ವಂದೇ ಭಾರತ್ ಯೋಜನೆಯಡಿ ಚೀನಾ ಜತೆಗಿನ ಒಪ್ಪಂದ ರದ್ದುಪಡಿಸಿದೆ.
ಚೀನಾದ ಸಿಆರ್ಆರ್ಸಿ ಯೋಂಗ್ಜಿ ಎಲೆಕ್ಟ್ರಿಕ್ ಕಂಪನಿ ಲಿಮಿಟೆಡ್ ಬಿಡ್ ಸಲ್ಲಿಸಿದ್ದರಿಂದ ಇಡೀ ಟೆಂಡರನ್ನು ಈಗ ಇಲಾಖೆ ರದ್ದುಪಡಿಸಿದೆ.
ತಲಾ 16 ಬೋಗಿಗಳ 44 ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣ ಕುರಿತು ರೈಲ್ವೆ ಇಲಾಖೆ ಜಾಗತಿಕ ಮಟ್ಟದಲ್ಲಿ ಜುಲೈನಲ್ಲಿ ಟೆಂಡರ್ ಕರೆದಿತ್ತು.
ಈ ಟೆಂಡರ್ಗೆ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್, ಭಾರತ್ ಇಂಡಸ್ಟ್ರೀಸ್, ಎಲೆಕ್ಟ್ರೋವೇವ್ಸ್ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ಎಂಇಡಿಎಚ್ಎ ಸರ್ವೊ ಡ್ರೈವ್ಸ್ ಲಿಮಿಟೆಡ್ ಸೇರಿದಂತೆ ಇನ್ನೂ ಹಲವಾರೂ ಕಂಪನಿಗಳು ಬಿಡ್ ಸಲ್ಲಿಸಿವೆ.
ಈಗಾಗಲೇ ಚೀನಾದ 59ಕ್ಕೂ ಆ್ಯಪ್ಗಳನ್ನೂ ಭಾರತವು ನಿಷೇಧಿಸಿದೆ.