ನವದೆಹಲಿ, ಆ 22 (DaijiworldNews/PY): ಲ್ಯಾಟಿನ್ ಅಮೆರಿಕದ ಈಕ್ವೆಡಾರ್ ಸಮೀಪದಲ್ಲಿ ದ್ವೀಪದಲ್ಲಿ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಗಣೇಶ ಚತುರ್ಥಿಯಂದು ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಸ್ಥಾಪನೆ ಘೋಷಿಸಿದ್ದಾರೆ.
ತನ್ನದೇ ಕೈಲಾಸ ದೇಶವಾದ ರಿಸರ್ವ್ ಬ್ಯಾಂಕ್ ಆಫ್ ಕೈಲಾಸವನ್ನು ನಿತ್ಯಾನಂದ ತನ್ನ ಸಹಚರರೊಂದಿಗೆ ಬಿಡುಗಡೆ ಮಾಡಿದ್ದು, ಹಿಂದೂ ಧರ್ಮದ ಸುಧಾರಕ ನಾನಲ್ಲ. ಬದಲಾಗಿ ನಾನು ಪುನರುಜ್ಜೀವನಗೊಳಿಸುವವನಾಗಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಕರೆನ್ಸಿ ಬಿಡುಗಡೆ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗಣೇಶ ಚತುರ್ಥಿಯಂದು ಬಿಡುಗಡೆ ಮಾಡಿರುವ ಈ ಕರೆನ್ಸಿಯನ್ನು ಭಗವಾನ್ ನಿತ್ಯಾನಂದ ಪರಮ ಶಿವಂ ಪಾದಗಳಿಗೆ ಅರ್ಪಿಸಲಾಗುತ್ತಿದೆ ಎಂದಿದ್ದಾರೆ.
ಈ ಕರೆನ್ಸಿ ತಯಾರಿಸಲು ಕೈಲಾಸ ಹಾಗೂ ಸನ್ಯಾಸಿಗಳ ತಂಡ 100ಕ್ಕೂ ಅಧಿಕ ಪುಸ್ತಕ ಹಾಗೂ 360 ಲೇಖನಗಳ, ಸಂಶೋಧನ ಪ್ರಬಂಧಗಳನ್ನು ಒಳಗೊಂಡಿದ್ದು, ಅಲ್ಲದೇ, ಹಿಂದೂ ಆರ್ಥಿಕ ನೀತಿಗಳ ವಿಚಾರವಾಗಿ ಸಂಶೋಧನೆ ಹಾಗೂ ಅಧ್ಯಯನ ಮಾಡಿ ತಯಾರು ಮಾಡಲಾಗಿದೆ ಎಂದು ಬರೆದಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ನಿತ್ಯಾನಂದ, ಆಂತರಿಕ ಹಾಗೂ ಬಾಹ್ಯ ವಿಶ್ವ ಕರೆನ್ಸಿಯನ್ನು ಹೇಗೆ ವಿನಿಮಯ ಮಾಡಬೇಕು ಎನ್ನುವ ವಿಚಾರವನ್ನು ಈ ಆರ್ಥಿಕ ನೀತಿ ತಿಳಿಸಿಕೊಡುತ್ತದೆ. ಎಂಒಯುಗೆ ಕೈಲಾಸ ದೇಶವು ಸಹಿ ಹಾಕಿದೆ. ಅಲ್ಲದೇ, ಇದರ ಆತಿಥ್ಯವನ್ನು ವಹಿಸಲಿದೆ ಎಂದ ತಿಳಿಸಿದ್ದಾರೆ.
ಹಲವು ಅತ್ಯಾಚಾರ, ವಂಚನೆ ಪ್ರಕರಣದ ಆರೋಪಿಯಾಗಿರುವ ನಿತ್ಯಾನಂದ ಸ್ವಾಮಿ ಯುವಕರನ್ನು, ಮಕ್ಕಳನ್ನು ಬಂಧಿಸಿಟ್ಟ ಆರೋಪದ ಬಳಿಕ ಭಾರತದಿಂದ ಓಡಿಹೋಗಿ ತಲೆಮರೆಸಿಕೊಂಡಿದ್ದು ಬಳಿಕ ಈಕ್ವೇಡಾರ್ನಲ್ಲಿ ತನ್ನದೇ ಆದ ದೇಶವನ್ನು ಸ್ಥಾಪಿಸಿಕೊಂಡಿದ್ದೇನೆ. ಅದಕ್ಕೆ ಕೈಲಾಸ ಎಂದು ಹೆಸರು ಇರಿಸಲಾಗಿದೆ ಎಂದು ಹೇಳಿದ್ದರು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಈಕ್ವೇಡಾರ್ ಸರ್ಕಾರ ನಾವು ಯಾವುದೇ ದ್ವೀಪವನ್ನು ಮಾರಾಟ ಮಾಡಿಲ್ಲ ಎಂದು ತಿಳಿಸಿದ್ದರು.