ನವದೆಹಲಿ, ಆ. 22(DaijiworldNews/HR): ಕೇಂದ್ರದ ಬಿಜೆಪಿ ಸರ್ಕಾರ ರಫೇಲ್ ಯುದ್ಧ ವಿಮಾನಕ್ಕಾಗಿ ಭಾರತೀಯ ಖಜಾನೆಯಿಂದ ಹಣವನ್ನು ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಫೇಲ್ ಗಾಗಿ ಭಾರತೀಯ ಬೊಕ್ಕಸದಿಂದ ಹಣವನ್ನು ಲೂಟಿ ಮಾಡಲಾಗಿದೆ. ಇನ್ನು ಫ್ರೆಂಚ್ ಕಂಪನಿ ಡಸಾಲ್ಟ್ ಏವಿಯೇಷನ್ ಯಿಂದ ಖರೀದಿಸಿದ ರಫೇಲ್ ವಿಮಾನಕ್ಕೆ ಸಂಬಂಧಿಸಿದ ಯಾವುದೇ ಆಫ್ಸೆಟ್ ಒಪ್ಪಂದಗಳ ಬಗ್ಗೆಸರ್ಕಾರಕ್ಕೆ ಇತರೆ ರಕ್ಷಣಾ ಆಫ್ಸೆಟ್ ಒಪ್ಪಂದಗಳ ಕುರಿತಾದ ಕಂಟ್ರೋಲರ್, ಆಡಿಟರ್ ಜನರಲ್ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಅವರು ಹೇಳಿದ್ದಾರೆ.
ಈ ಸಮಯದಲ್ಲಿ ಮಹಾತ್ಮ ಗಾಂಧಿಯವರ ಹೇಳಿಕೆಯನ್ನೂ ರಾಹುಲ್ ಉಲ್ಲೇಖಿಸಿದ್ದು 'ಸತ್ಯ ಒಂದೇ ಮಾರ್ಗಗಳು ಹಲವು' ಎಂದು ಬರೆದಿದ್ದಾರೆ. ಅಷ್ಟೆ ಅಲ್ಲದೆ ಈ ಒಪ್ಪಂದದಲ್ಲಿರುವ ಸತ್ಯವು ಕೊನೆಯದಾಗಿ ಜನರಿಗೆ ತಿಳಿಯುತ್ತದೆ ಎಂದು ಹೇಳಿದ್ದಾರೆ.