ಸೂರತ್, ಆ 22 (DaijiworldNews/PY): ದೇಶಾದ್ಯಂತ ವಿನಾಯಕನ ಪೂಜೆ ನಡೆಯುತ್ತಿದೆ. ಹಲವಾರು ಮಂದಿ ಪರಿಸರ ಸ್ನೇಹಿ ಗಣೇಶನ ಮೂರ್ತಿ ತಯಾರಿಸಿ ಪೂಜೆ ಸಲ್ಲಿಸುತ್ತಿದ್ದರೆ ಇಲ್ಲೋರ್ವ ವೈದ್ಯೆ ಡ್ರೈಫ್ರೂಟ್ಸ್ಗಳಿಂದ ಗಣೇಶನ ವಿಗ್ರಹ ತಯಾರು ಮಾಡಿದ್ದಾರೆ.
ಗುಜರಾತ್ ಮೂಲದ ನಿವಾಸಿ ಡಾ.ಅದಿತಿ ಅವರು ಗಣೇಶ ಚತುರ್ಥಿ ಹಿನ್ನೆಲೆ ಡ್ರೈಫ್ರೋಟ್ಸ್ನಿಂದ ಸುಮಾರು 20 ಇಂಚುಗಳ ಗಣಪತಿಯ ವಿಗ್ರಹವನ್ನು ಸಿದ್ದಪಡಿಸಿದ್ದಾರೆ. ಈ ಗಣೇಶನ ವಿಗ್ರಹವನ್ನು ವಾಲ್ನಟ್ಸ್, ಕಡಲೆಕಾಯಿ, ಗೋಡಂಬಿ ಮತ್ತು ಬಾದಾಮಿ ಮುಂತಾದ ಡ್ರೈ ಫ್ರೂಟ್ಸ್ನಿಂದ ತಯಾರಿಸಲಾಗಿದೆ.
ಕೊರೊನಾ ಹಿನ್ನೆಲೆ ಎಲ್ಲೆಡೆ ಸರಳವಾಗಿ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದಾರೆ. ಅದಿತಿ ಅವರು ಕೊರೊನಾ ಆಸ್ಪತ್ರೆಯಲ್ಲಿ ಈ ಡ್ರೈಫ್ರೂಟ್ಸ್ ಗಣಪನನ್ನು ತಯಾರಿಸಲು ತೀರ್ಮಾನ ಮಾಡಿದ್ದು, ವಿಗ್ರಹಕ್ಕೆ ಪೂಜೆ-ಪುನಸ್ಕಾರ ನೆರವೇರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಈ ಗಣೇಶನ ವಿಗ್ರಹಗಳನ್ನು ನಾನು ಡ್ರೈಫ್ರೂಟ್ಸ್ಗಳಿಂದ ಸಿದ್ದಪಡಿಸಿದ್ದೇನೆ. ವಿಗ್ರಹಕ್ಕೆ ಪೂಜೆಯಾದ ನಂತರ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಡ್ರೈಫ್ರೂಟ್ಸ್ಗಳನ್ನು ಹಂಚಲಾಗುತ್ತದೆ. ಈ ಮೂಲಕ ಗಣೇಶನ ವಿಗ್ರಹವನ್ನು ವಿಸರ್ಜನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.