ಮುಂಬೈ, ಆ 22 (DaijiworldNews/PY): ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಶನಿವಾರ ಸಿಬಿಐ ತಂಡವು ಮೃತ ಸುಶಾಂತ್ ಸಿಂಗ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಶಾಂತ್ ಸಿಂಗ್ ಅವರು ಸಿಬ್ಬಂದಿಯೊಂದಿಗೆ ಸ್ನೇಹಿತ ಸಿದ್ದಾರ್ಥ್ ಪಿಥಾನಿ ಅವರನ್ನು ಸುಶಾಂತ್ ಅವರ ಬಾದ್ರಾ ನಿವಾಸಕ್ಕೆ ತನಿಖೆಗೆಂದು ಸಿಬಿಐ ಅಧಿಕಾರಿಗಳು ಕರೆತಂದಿದ್ದಾರೆ.
ಸಿದ್ದಾರ್ಥಿ ಪಿಥಾನಿ ಸುಶಾಂತ್ ಸಿಂಗ್ ಅವರ ಗೆಳೆಯ ಹಾಗೂ ಸುಶಾಂತ್ ಇರುವ ಫ್ಲಾಟ್ನಲ್ಲಿ ಇರುತ್ತಿದ್ದು, ಈತ ಸುಶಾಂತ್ ಸಿಂಗ್ ಅವರ ಕ್ರಿಯೇಟಿವ್ ಮ್ಯಾನೇಜರ್ ಎಂದು ಕೆಲವು ವರದಿಗಳು ತಿಳಿಸಿತ್ತು.
ಇನ್ನು ಸಿಬಿಐ ತಂಡ ಸುಶಾಂತ್ ಸಿಂಗ್ ಮನೆಗೆ ಭೇಟಿ ಆಗುವ ಮುನ್ನ ಸುಶಾಂತ್ ಸಿಂಗ್ ಅವರ ಬಾಣಸಿಗನನ್ನು ವಿಚಾರಣೆ ನಡೆಸಿದ್ದು, ಬಾಣಸಿಗನನ್ನು ನಿನ್ನೆ ಸಾಂತಾಕ್ರೂಜ್ನಲ್ಲಿರು ಅತಿಥಿ ಗೃಹಕ್ಕೆ ಕರೆತರಲಾಗಿತ್ತು.
ಸುಶಾಂತ್ ಸಿಂಗ್ ಅವರ ಶವವಿದ್ದ ಕೋಣೆಯ ಬಾಗಿಲು ಒಡೆದ ಬೀಗ ರಿಪೇರಿಗಾರ ರಫಿ ಶೇಖ್ ಅಂದು ನಡೆದ ಘಟನೆಯ ಬಗ್ಗೆ ತಿಳಿಸಿದ್ದು, ಸುಶಾಂತ್ ಸಿಂಗ್ ಅವರ ಮೃತಪಟ್ಟ ದಿನದಂದ ನನ್ನನ್ನು ಬೆಡ್ರೂಂನ ಬಾಗಿಲು ಒಡೆಯಲು ಕರೆಸಿದ್ದರು. ಲಾಕ್ ಕಂಪ್ಯೂಟರೈಸ್ಡ್ ಆಗಿದ್ದ ಕಾರಣ 2 ಸಾವಿರ ಆಗುತ್ತದೆ ಎಂದು ಹೇಳಿದ್ದೆ. ಆ ವೇಳೆ ಮನೆಯಲ್ಲಿ ನಾಲ್ಕು ಮಂದಿ ಇದ್ದರು. ಬಳಿಕ ಲಾಕ್ ಅನ್ನು ಚಾಕು ಹಾಗೂ ಸುತ್ತಿಗೆಯನ್ನು ಉಪಯೋಗಿಸಿ ತೆಗೆಯಲಾಯಿತು. ಬಾಗಿಲು ಅನ್ಲಾಕ್ ಆಗುತ್ತಿದ್ದಂತೆಯೇ ನೀನು ಇಲ್ಲಿಂದ ಹೊರಡು ಎಂದಿದ್ದರು. ಅಲ್ಲದೇ, ಕೋಣೆಯೊಳಕ್ಕೆ ಹೋಗಲು ಕೂಡಾ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾನೆ.
ನಾನು ಮಧ್ಯಾಹ್ನ ಸುಮಾರು 1.30 ರಿಂದ 1.45ಕ್ಕೆ ಬಾಗಿಲಿನ ಲಾಕ್ ತೆಗೆಯಲು ಹೋಗಿದ್ದೆ. ಈ ಸಂದರ್ಭ ಅವರು ನಾಲ್ಕು ಮಂದಿ ಮಾತ್ರ ಇದ್ದರು. ಪೊಲೀಸರು ಕೂಡಾ ಇರಲಿಲ್ಲ. ಆ ಮನೆಯಿಂದ ತೆರಳಿದ ಒಂದು ಗಂಟೆಯ ನಂತರ ಪೊಲೀಸರು ನನ್ನನ್ನು ಕರೆಸಿದ್ದು, ಬಾಗಿಲು ಒಡೆದಿರುವ ಬಗ್ಗೆ ವಿಚಾರಣೆ ಮಾಡಿದ್ದರು ಎಂದು ತಿಳಿಸಿದ್ದಾನೆ.