ನವದೆಹಲಿ, ಆ. 23(DaijiworldNews/HR):ಆಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೇಚಾ ಹಿಂದಿ ಭಾಷೆ ಗೊತ್ತಿಲ್ಲದವರು ಮೀಟಿಂಗಿನಿಂದ ಹೊರನಡೆಯುವಂತೆ ಹೇಳಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಭಾರತದಲ್ಲಿ 'ಟುಕ್ಡೇ ಟುಕ್ಡೇ ಗ್ಯಾಂಗ್' ಅಧಿಕಾರದಲ್ಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಂದಿ ಭಾಷೆ ಗೊತ್ತಿಲ್ಲವೆಂದವರನ್ನು ಕೇಂದ್ರ ಸರ್ಕಾರದ ಕಾರ್ಯದರ್ಶಿಯೊಬ್ಬರು ಮೀಟಿಂಗ್ ನಿಂದ ಒಂದರಿಂದ ಹೊರಗುಳಿಯುವಂತೆ ಹೇಳುತ್ತಾರೆ, ಇದು ಸಹಿಸಲು ಅಸಾಧ್ಯವಾದ ವಿಚಾರ. ಸರ್ಕಾರಕ್ಕೆ ಯಾವುದೇ ಶಿಷ್ಟತೆ ಇದ್ದರೆ ಕೂಡಲೇ ಆ ಕಾರ್ಯದರ್ಶಿಯನ್ನು ತಮಿಳು ನಾಗರಿಕ ಸೇವಕನನ್ನಾಗಿ ನೇಮಿಸಬೇಕು. ಈಗ ಅಧಿಕಾರದಲ್ಲಿರುವ ತುಕ್ಡೆ-ತುಕ್ಡೆ ಗ್ಯಾಂಗ್ ದೇಶದ ಏಕತೆಯನ್ನು ನಾಶಮಾಡಲು ನಿರ್ಧರಿಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇನ್ನು ನಲ್ವತ್ತು ಸೆಕೆಂಡ್ಗಳ ವಿಡಿಯೋ ಒಂದರಲ್ಲಿ ಕಾರ್ಯದರ್ಶಿ ಕೊಟೇಚಾ ಯಾರಿಗೆಲ್ಲ ಹಿಂದಿ ಭಾಷೆ ಗೊತ್ತಿಲ್ಲವೋ ಅವರೆಲ್ಲಾ ಹೊರ ಹೋಗಬಹುದೆಂದು ಹೇಳಿರುವ ವಿಡಿಯೋ ಭಾರೀ ವೈರಲ್ ಆಗಿಗುತ್ತಿದ್ದು, ಈಗಾಗಲೇ ಸಂಸದರಾದ ಕನಿಮೋಳಿ ಹಾಗೂ ಕಾರ್ತಿ ಚಿದಂಬರಂ ಈ ಸಂಬಂಧ ಟ್ವೀಟ್ ಮಾಡಿ ಹಿಂದಿ ಹೇರಿಕೆ ಕುರಿತು ಧ್ವಬಿ ಎತ್ತಿದ್ದಾರೆ.