ನವದೆಹಲಿ, ಆ. 23(DaijiworldNews/HR): ವಿದ್ಯಾರ್ಥಿಗಳ ಮನದ ಮಾತನ್ನು ಕೇಂದ್ರ ಸರ್ಕಾರ ಆಲಿಸಿ ಮತ್ತು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಐಐಟಿ ಹಾಗೂ ವೈದ್ಯಕೀಯ ಕೋರ್ಸ್ ಗಳಿಗಾಗಿ ಜೆಇಇ ಮತ್ತು ಎನ್ ಇಇಟಿ ಪರೀಕ್ಷೆಗಳು ಮುಂದೂಡಲಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎನ್ ಇಇಟಿ, ಜೆಇಇ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳ ಮನದ ಮಾತನ್ನು ದಯವಿಟ್ಟು ಕೇಂದ್ರ ಸರ್ಕಾರ ಕೇಳಬೇಕು, ಆ ಬಳಿಕ ಸ್ವೀಕರಿಸಹಬಹುದಾದ ಪರಿಹಾರಕ್ಕೆ ಬರಬೇಕೆಂದು ಎಂದಿದ್ದಾರೆ.
ಇನ್ನು ಪರೀಕ್ಷೆ ಮುಂದೂಡುವಂತೆ ಪೋಷಕರು ಅರ್ಜಿ ಸಲ್ಲಿಸಿರುವುದನ್ನು ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರುತ್ತಿರುವಂತೆಯೇ ರಾಹುಲ್ ಗಾಂಧಿ ಪೋಷಕರ ಬೇಡಿಕೆಯನ್ನು ಬೆಂಬಲಿಸಿದ್ದಾರೆ.
ಕೇಂದ್ರ ಸರ್ಕಾರ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ಅವರ ಹೇಳಿಕೆಯ ಬಳಿಕ ಇದೀಗ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.