ತಿರುವನಂತಪುರ, ಆ. 24 (DaijiworldNews/MB) : ಕೇರಳ ರಾಜ್ಯದಲ್ಲಿ ಸೋಮವಾರ ಬೆಳಗ್ಗೆ ಒಂದು ದಿನದ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು ಅಧಿವೇಶದನದ ಆರಂಭದಲ್ಲೇ ವಿರೋಧ ಪಕ್ಷ ಯುಡಿಎಫ್ ಕೇರಳದ ಎಲ್ಡಿಎಫ್ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದೆ.
ಬೆಳಗ್ಗೆ ಸ್ಪೀಕರ್ ಶ್ರೀರಾಮಕೃಷ್ಣನ್ ಅವರು ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಗ್ರೀನ್ ಸಿಗ್ನಲ್ ನೀಡಿ ಈ ವಿಚಾರದ ಬಗ್ಗೆ ಚರ್ಚೆಗೆ 5 ಗಂಟೆಗಳ ಕಾಲವಕಾಶ ನೀಡಿದ್ದು ಪ್ರಸ್ತುತ ಕೇರಳ ಸದನದಲ್ಲಿ ಅವಿಶ್ವಾಸ ನಿರ್ಣಯದ ಕುರಿತಾಗಿ ಚರ್ಚೆ ನಡೆಯುತ್ತಿದೆ.
ಇನ್ನು ಇತ್ತೀಚೆಗೆ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನ ಸುರೇಶ್ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಸ್ಪೀಕರ್ ಶ್ರೀರಾಮಕೃಷ್ಣನ್ ಅವರು ಕೂಡಾ ಭಾಗಿಯಾಗಿದ್ದರು. ಇದರಿಂದಾಗಿ ಸದಸನ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದ ಐಯುಎಂಎಲ್ ನ ಸದಸ್ಯ ಎಂ ಉಮ್ಮರ್ ಅವರು ನೊಟೀಸ್ ನೀಡಿದ್ದು ಈಗ ಸ್ಪೀಕರ್ ತಮ್ಮ ಸ್ಥಾನದಿಂದ ಕೆಳಗಿಯಬೇಕು ಎಂದು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಾಲಾ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂವಿಧಾನ ವಿಧಿ 179ರ ಸಿ ಪರಿಚ್ಛೇದವನ್ನು ಉಲ್ಲೇಖಿಸಿದ ಸ್ಪೀಕರ್ ಶ್ರೀರಾಮಕೃಷ್ಣನ್ ಅವರು ಅಧಿವೇಶನಕ್ಕೂ 14 ದಿನ ಮೊದಲು ನೊಟೀಸ್ ನೀಡದಿದ್ದರೆ ಸ್ಪೀಕರ್ ಅವರನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ವಿರೋಧ ಪಕ್ಷ ನೀಡಿದ ನೊಟೀಸ್ಗೆ ತಮ್ಮ ವಿರುದ್ಧ ನಿರ್ಣಯ ಹೊರಡಿಸುವಂತೆ ಸ್ಪೀಕರ್ ಹೇಳಿ ನೊಟೀಸ್ ತಿರಸ್ಕರಿಸಿದ್ದರು.