ನವದೆಹಲಿ, ಆ. 24(DaijiworldNews/HR):ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿರುವ ವಕೀಲ ಪ್ರಶಾಂತ್ ಭೂಷಣ್ "ತಾನು ಕ್ಷಮೆಕೋರುವುದಿಲ್ಲ" ಎಂಬ ಹೇಳಿಕೆನ್ನು ಸೋಮವಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದಾರೆ.
ನಾನು ಮಾಡಿರುವ ಟ್ವೀಟ್ ಗಳ ಬಗ್ಗೆ ಕ್ಷಮೆ ಕೊರುವುದಿಲ್ಲ ಯಾಕೆಂದರೆ, ನನ್ನ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಸಮಾಜದ ಸುಧಾರಣೆಗೆ ಟೀಕೆಗಳು ಅಗತ್ಯ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನನ್ನ ಟ್ವೀಟ್ ಗಳನ್ನು ಪರಿಗಣಿಸಬೇಕಿತ್ತು. ಆ ನಂಬಿಕೆಯ ಆಧಾರದಲ್ಲಿ ಷರತ್ತು ಅಥವಾ ಬೇಷರತ್ತಾಗಿ ಕ್ಷೆಮೆಯಾಚಿಸಿದರೆ ಅದು ಸುಳ್ಳಾಗುತ್ತದೆ. ಕ್ಷಮೆಕೇಳುವುದು ಕೇವಲ ಒಂದು ಮಂತ್ರವಾಗಬಾರದು. ಯಾವುದೇ ಕ್ಷಮೆಯಾಚನೆ ಇರಲಿ ಅದು ನ್ಯಾಯಾಲಯದಲ್ಲಿ ಹೇಳುವಂತೆ ಪ್ರಾಮಾಣಿಕವಾಗಿರಬೇಕು ಎಂದು ಭೂಷಣ್ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ಸಿಜೆಐ ಎಸ್. ಎ. ಬೋಬ್ದೆ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ನಿಂದನಾತ್ಮಕವಾಗಿ ಟ್ವೀಟ್ ಮಾಡಿದ್ದ ವಕೀಲ ಪ್ರಶಾಂತ್ ಭೂಷಣ್ರನ್ನು ಸರ್ವೋಚ್ಚ ನ್ಯಾಯಾಲಯವು ದೋಷಿಎಂದು ಘೋಷಿಸಿತ್ತು ಹೇಳಿ, ಪ್ರಶಾಂತ್ ಭೂಷಣ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದ ಸುಪ್ರೀಂಕೋರ್ಟ್, ತೀರ್ಪಿನಲ್ಲಿ ಅವರು ಮಾಡಿದ್ದ ಪ್ರಮುಖ 2 ಟ್ವೀಟ್ಗಳನ್ನು ನ್ಯಾಯಾಂಗ ನಿಂದನೆ ವ್ಯಾಪ್ತಿಗೊಳಪಡಿಸಿತ್ತು.
ಸಿಜೆಐ ಎಸ್.ಎ. ಬೋಬ್ದೆ ಕಲಾಪಕ್ಕೆ ಗೈರು ಹಾಜರಾಗಿ ಐಷಾರಾಮಿ ಬೈಕ್ನಲ್ಲಿ ಹೆಲ್ಮೆಟ್ ಧರಿಸದೆ ಜಾಲಿ ರೈಡ್ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಟ್ವೀಟ್ನಲ್ಲಿ ನಿಂದಿಸಿದ್ದರು. ಆದರೆ ನಿಜವಾಗಿ, ಸ್ಟಾಂಡ್ ಹಾಕಿದ್ದ ಬೈಕ್ ಮೇಲೆ ಬೋಬ್ದೆ ಕುಳಿತು ಫೋಟೋ ತೆಗೆಸಿಕೊಂಡಿದ್ದರು.