ಬಳ್ಳಾರಿ, ಆ 25 (DaijiworldNews/PY): ಸೆಲ್ಫಿ ವಿಡಿಯೋ ಮಾಡಿ ಯುವ ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವಕೀಲರನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮೂಲದ ಮಹೇಶ್ (28) ಎನ್ನಲಾಗಿದೆ. ಇವರು ಹೊಸಪೇಟೆಯ ಬಳ್ಳಾರಿ ಸರ್ಕಲ್ನಲ್ಲಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಲೀಗಲ್ ಅಡ್ವೈಸರ್ ಆಗಿದ್ದರು.
ಮಹೇಶ್ ವಿಷಸೇವಿಸುವ ಮುನ್ನ ತಮ್ಮ ಮೊಬೈಲ್ ವಿಡಿಯೋ ಮಾಡಿದ್ದಾರೆ.
ಇನ್ನು ಮಹೇಶ್ ಮೃತಪಟ್ಟ ಸ್ಥಳದಲ್ಲಿ ಡೆತ್ ನೋಟ್ ದೊರೆತ್ತಿದ್ದು, ನನ್ನ ಸಾವಿಗೆ ಈಕ್ವಿಟಾಸ್ ಬ್ಯಾಂಕ್ನ ಡಿಡಿಎಂ ರಾಘವೇಂದ್ರ, ಜನರಲ್ ಮ್ಯಾನೇಜರ್ ರಮೇಶ್, ಬಸವರಾಜ್, ಬ್ರಾಂಚ್ ಮ್ಯಾನೇಜರ್ ಏಕಾಂತಪ್ಪ ಅವರೇ ಕಾರಣ. ಅಧಿಕಾರಿಗಳು ದಾಖಲೆ ಸರಿ ಇಲ್ಲದಿದ್ದರೂ ಕೂಡಾ ಲೋನ್ ಕೊಡಲು ಒತ್ತಾಯಿಸುತ್ತಿದ್ದರು ಎಂದು ಮಹೇಶ್ ಡೆತ್ ನೋಟ್ನಲ್ಲಿ ಬರೆದಿದ್ದಾರೆ.