ಉತ್ತರ ಪ್ರದೇಶ, ಆ 25 (DaijiworldNews/PY): ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಯುಪಿಯಲ್ಲಿ ಅಪರಾಧ ಪ್ರಮಾಣ, ಸರ್ಕಾರದ ಆಡಳಿತದ ವೇಗಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಸರ್ಕಾರದ ಆಡಳಿತದ ವೇಗಕ್ಕಿಂತ ಅಪರಾಧದ ಪ್ರಮಾಣವು ಎರಡು ಪಟ್ಟು ಹೆಚ್ಚಾಗಿದೆ. ಅಪರಾಧವು ರಾಜ್ಯದ ಬೀದಿಗಳಲ್ಲಿ ಗೋಚರಿಸುತ್ತಿದ್ದು, ಅಪರಾಧದ ಘಟನೆಗಳನ್ನು ಯುಪಿ ಸರ್ಕಾರವು ಪದೇ ಪದೇ ಒಳಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ತಮ್ಮ ಸಮಸ್ಯೆಗಳನ್ನು ಪರಿಹರಿಸುವ ಬದಲು ಜನರಿಗೆ ಬೆದರಿಕೆ ಹಾಕುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಶುಕ್ರವಾರ ಆರೋಪಿಸಿದ್ದರು. ರಸಗೊಬ್ಬರ ಹಗರಣದ ಬಗ್ಗೆ ಹಿಂದಿ ದಿನಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ಅವರು, ಯೂರಿಯಾ ತುಂಬಿದ ಎರಡು ಟ್ರಕ್ಗಳು ನಾಪತ್ತೆಯಾಗಿದ್ದು, ಒಂದು ಟ್ರಕ್ ಚಂದೌಸಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದ್ದರು.