ನವದೆಹಲಿ, ಆ 25 (DaijiworldNews/PY): ಮುಂದಿನ ಆರು ತಿಂಗಳಲ್ಲಿ ಮೊಬೈಲ್ ಸೇವೆಗಳ ಬೆಲೆ ಏರಿಕೆಯಾಗುವ ಬಗ್ಗೆ ಭಾರತಿ ಏರ್ಟೆಲ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ ಸುಳಿವು ನೀಡಿದ್ದು, ಕಡಿಮೆ ದರದಲ್ಲಿ ಡೇಟಾ ಟೆಲಿಕಾಂ ಉದ್ಯಮಕ್ಕೆ ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಿಂಗಳಿಗೆ 160 ರೂ ನೀಡಿ 16 ಜಿಬಿ ಡೇಟಾ ಬಳಸುತ್ತಿರುವುದು ದುರಂತ. ಈ ಹಂತದಲ್ಲಿ ನೀವು ತಿಂಗಳಿಗೆ 16 ಜಿಬಿ ಡೇಟಾವನ್ನು ಬಳಸುತ್ತಿದ್ದು, ಅಥವಾ ನೀವು ಹೆಚ್ಚು ಪಾವತಿ ಮಾಡಲು ತಯಾರಾಗಬೇಕು. ಯುಎಸ್ ಅಥವಾ ಯುರೋಪ್ನಂತೆ ನಾವು 50-60 ಡಾಲರ್ಗಳನ್ನು ಕೇಳುತ್ತಿಲ್ಲ. ಆದರೆ , ತಿಂಗಳಿಗೆ 2 ಡಾಲರ್ ನೀಡಿ ತಿಂಗಳಿಗೆ 16ಜಿಬಿ ಡೇಟಾ ಬಳಸುವುದು ಖಂಡಿತವಾಗಿಯೂ ಸಮರ್ಥನೀಯವಲ್ಲ ಎಂದಿದ್ದಾರೆ.
ಆರು ತಿಂಗಳಲ್ಲಿ ಪ್ರತಿ ಬಳಕೆದಾರರ ಸರಾಸರಿ ಆದಾಯ (ಎಆರ್ಪಿಯು) 200 ರೂ.ಗಳನ್ನು ದಾಟಲಿದೆ. ಸರಾಸರಿ 300 ರೂ. ಆದಾಯವು ಪ್ರತಿ ಗ್ರಾಹಕನಿಂದ ಬಂದರೆ ಉದ್ಯಮವು ಸ್ಥಿರವಾಗಿ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ನಿಮ್ಮ ಬಳಕೆಗಿಂತ ಹೆಚ್ಚು ಟಿವಿ, ಚಲನಚಿತ್ರಗಳು, ಮನರಂಜನೆ ಮತ್ತು ಇತರ ಪ್ರಮುಖ ವಿಶೇಷ ಸೇವಾ ನೆಟ್ವರ್ಕ್ಗಳನ್ನು ನೋಡುವುದಾದರೆ, ನಿಮಗೆ ಹೆಚ್ಚು ಡೇಟಾದ ಅವಶ್ಯಕತೆ ಇದ್ದು, ಹೆಚ್ಚು ಪಾವತಿ ಮಾಡಬೇಕಾಗುತ್ತದೆ ಎಂದಿದ್ದಾರೆ.