ನವದೆಹಲಿ, ಆ 25 (DaijiworldNews/PY): ಪತ್ರಕರ್ತರ ಸುರಕ್ಷತೆ ಹಾಗೂ ಸ್ವಾತಂತ್ರ್ಯದ ಬಗ್ಗೆ ಯುಪಿ ಸರ್ಕಾರದ ವರ್ತನೆ ಖಂಡನೀಯ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದ ಸರ್ಕಾರ ವಿರುದ್ದ ಹರಿಹಾಯ್ದಿದ್ದಾರೆ.
ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಅವರು, ಜೂನ್ 19 - ಶ್ರೀ ಶುಭಮಣಿ ತ್ರಿಪಾಠಿ ಹತ್ಯೆ, ಜುಲೈ 20 - ಶ್ರೀ ವಿಕ್ರಮ್ ಜೋಶಿಯ ಕೊಲೆ, ಆಗಸ್ಟ್ 24 - ಶ್ರೀ ರತನ್ ಸಿಂಗ್, ಬಲಿಯಾ ಅವರ ಹತ್ಯೆಯಾಗಿದೆ. ಕಳೆದ 3 ತಿಂಗಳಲ್ಲಿ 3 ಪತ್ರಕರ್ತರು ಹತ್ಯೆಗೈಯಲಾಗಿದ್ದು, ಸುದ್ದಿ ಬರೆದ ಕಾರಣ 11 ಪತ್ರಕರ್ತರ ಮೇಲೆ ಎಫ್ಐಆರ್ ದಾಖಲಾಗಿದೆ. ಪತ್ರಕರ್ತರ ಸುರಕ್ಷತೆ ಮತ್ತು ಸ್ವಾತಂತ್ರ್ಯದ ಬಗ್ಗೆ ಯುಪಿ ಸರ್ಕಾರದ ವರ್ತನೆ ಖಂಡನೀಯ ಎಂದಿದ್ದಾರೆ.
ಇದಕ್ಕೂ ಮೊದಲು ಮಾಡಿರುವ ಟ್ವೀಟ್ನಲ್ಲಿಯೂ ಕೂಡಾ ಯುಪಿ ಸರ್ಕಾರದ ವಿರುದ್ದ ಕಿಡಿಕಾರಿದ್ದ ಅವರು, ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಸರ್ಕಾರದ ಆಡಳಿತದ ವೇಗಕ್ಕಿಂತ ಅಪರಾಧದ ಪ್ರಮಾಣವು ಎರಡು ಪಟ್ಟು ಹೆಚ್ಚಾಗಿದೆ. ಅಪರಾಧವು ರಾಜ್ಯದ ಬೀದಿಗಳಲ್ಲಿ ಗೋಚರಿಸುತ್ತಿದ್ದು, ಅಪರಾಧದ ಘಟನೆಗಳನ್ನು ಯುಪಿ ಸರ್ಕಾರವು ಪದೇ ಪದೇ ಒಳಗೊಳ್ಳುತ್ತಿದೆ ಎಂದು ಹೇಳಿದ್ದರು.