ನವದೆಹಲಿ, ಆ. 26 (DaijiworldNews/MB) : ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಈಗಾಗಲೇ ಹೊಸ ವಿನ್ಯಾಸದ ಪರಿಚಯ ಮಾಡಿದ್ದು ತನ್ನ ಕ್ಲಾಸಿಕ್ ವಿನ್ಯಾಸವನ್ನು ಸೆಪ್ಟೆಂಬರ್ ತಿಂಗಳಿನಿಂದ ಸ್ಥಗಿತಗೊಳಿಸಲು ತೀರ್ಮಾನ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಫೇಸ್ಬುಕ್, ಆಗಸ್ಟ್ ಅಂತ್ಯದವರೆಗೆ ಮಾತ್ರ ಕ್ಲಾಸಿಕ್ ವರ್ಷನ್ ಲಭ್ಯವಾಗಲಿದೆ. ಬಳಿಕ ಕ್ಲಾಸಿಕ್ ವಿನ್ಯಾಸವನ್ನು ಸ್ಥಗಿತಗೊಳಿಸಿ ಹೊಸ ವರ್ಷನ್ ಮಾತ್ರ ಜಾರಿಗೆ ಬರಲಿದೆ. ಮೆಸೆಂಜರ್, ಇನ್ಸ್ಟಾಗ್ರಾಂ, ವಾಟ್ಸಾಪ್ಗಳಿಗಿಂತ ಅಧಿಕವಾಗಿ ಜನರು ಫೇಸ್ಬುಕ್ ಬಳಸುತ್ತಾರೆ. ಡೆಸ್ಕ್ ಟಾಪ್ ಬಳಕೆದಾರರೂ ಕೂಡಾ ಹೆಚ್ಚಾಗಿದ್ದಾರೆ. ಈ ಕಾರಣದಿಂದ ಅಪ್ಗ್ರೇಡ್ ವರ್ಷನ್ ಜಾರಿಗೆ ತರಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳನ್ನು ತರಲಾಗುತ್ತದೆ ಎಂದು ತಿಳಿಸಿದೆ.
ಇನ್ನು ಸೆಪ್ಟೆಂಬರ್ ತಿಂಗಳಿನಿಂದ ಫೇಸ್ಬುಕ್ನ ಹೊಸ ವರ್ಷನ್ನೊಂದಿಗೆ ಡಾರ್ಕ್ ಥೀಮ್ ಆಯ್ಕೆಯೂ ಲಭ್ಯವಾಗಲಿದ್ದು ಈ ಡಾರ್ಕ್ ಥೀಮ್ ಬೇಡವಾದರೆ ಆಫ್ ಮಾಡಬಹುದಾಗಿದೆ. ಇನ್ನು ಹೊಸ ವಿನ್ಯಾಸದಲ್ಲಿ ವಿಸ್ತಾರವಾದ ಮತ್ತು ಸ್ಪಷ್ಟವಾದ ನ್ಯೂಸ್ ಫೀಡ್ ಇದ್ದು ಲೋಡಿಂಗ್ ಸಂದರ್ಭದಲ್ಲಿ ಸುಧಾರಣೆ ತರಲಾಗಿದೆ, ಫೇಸ್ಬುಕ್ ವಾಚ್, ಮಾರ್ಕೆಟ್ ಪ್ಲೇಸ್, ಯುಐ, ಗೇಮಿಂಗ್ ಐಕಾನ್, ಮೆಸೆಂಜರ್ ಐಕಾನ್, ಸೆಟ್ಟಿಂಗ್ಸ್ ಕೀ ಹಾಗೂ ನೋಟಿಫಿಕೇಶನ್ ಕೂಡಾ ಬದಲಾಗಿದೆ.