ಶಿವಮೊಗ್ಗ, ಆ.27(DaijiworldNews/HR): ಸಾಗರ ಗ್ರಾಮಾಂತರ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಅವರ ಫೇಸ್ಬುಕ್ ಖಾತೆ ಹ್ಯಾಕ್ ಮಾಡಲಾಗಿದ್ದು, ವಂಚಕರು ಯಾವುದೋ ತುರ್ತು ಅವಶ್ಯಕತೆ ಇದ್ದು ತಮ್ಮ ಖಾತೆಗೆ ಹಣ ಜಮೆ ಮಾಡುವಂತೆ ಸುನೀಲ್ ಅವರ ಸ್ನೇಹಿತರಿಗೆ ಸಂದೇಶ ಕಳುಹಿಸಿದ ಘಟನೆ ನಡೆದಿದೆ.
ಸುನೀಲ್ ಅವರಿಗೆ ಯಾವುರೋ ತುರ್ತು ಇರಬಹುದು ಎಂದು ಕೆಲವರು ಹಣ ಹಾಕಲು ವಿಚಾರಿಸಿದ್ದು, ಸಂದೇಶ ಹಿಂದಿಯಲ್ಲಿ ಇದ್ದ ಕಾರಣ ಅನುಮಾನಗೊಂಡು ಕೆಲವು ಸ್ನೇಹಿತರು ಪರಿಶೀಲಿಸಿದಾಗ ಖಾತೆ ಹ್ಯಾಕ್ ಆಗಿರುವ ಸತ್ಯ ಬಯಲಾಗಿದ್ದು, ತಕ್ಷಣ ಎಲ್ಲರಿಗೂ ನಿಜಾಂಶವನ್ನುತಿಳಿಸಲಾಗಿದೆ.
ಇನ್ನು ಫೇಸ್ಬುಕ್ ಖಾತೆ ಹ್ಯಾಕ್ ಮಾಡಿರುವ ವಂಚಕರು ಹಣದ ಬೇಡಿಕೆಯ ಸಂದೇಶ ಕಳುಹಿಸಿದ್ದಾರೆ ಎಂದು ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದು,ಪ್ರಕರಣ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾ ಅಪರಾಧ ತನಿಖಾ ವಿಭಾಗದ ಇನ್ಸ್ಪೆಕ್ಟರ್ ಕೆ.ಟಿ. ಗುರುರಾಜ್ ಕರ್ಕಿ ತಿಳಿಸಿದ್ದಾರೆ.