ಚಿತ್ತೂರು, ಆ.27(DaijiworldNews/HR): ಮೊಬೈಲ್ ಸಾಗಿಸ್ತಿದ್ದ ಟ್ರಕ್ ಅನ್ನು ಹೆದ್ದಾರಿ ದರೋಡೆಕೋರರ ಗುಂಪೊಂದು ಹೈಜಾಕ್ ಮಾಡಿ ಅದರಲ್ಲಿದ್ದ ಬರೋಬ್ಬರಿ 6 ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ಗಳನ್ನು ದೋಚಿ ಪರಾರಿಯಾದ ಘಟನೆ ಆಂಧ್ರಪ್ರದೇಶ-ತಮಿಳುನಾಡು ಗಡಿ ನಗರಿಯಲ್ಲಿ ನಡೆದಿದೆ.
ಸುಮಾರು 15 ಸಾವಿರ ಮೊಬೈಲ್ ಫೋನ್ ಗಳನ್ನು ತುಂಬಿದ ಟ್ರಕ್ ಚೆನ್ನೈನ ಶ್ರಿಪೆರಂಬದೂರ್ ನಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದು, ಆರೋಪಿಗಳು ಶ್ರಿಪೆರಂಬದೂರ್ನಿಂದ ಟ್ರಕ್ ಬೆನ್ನಟ್ಟಿ ತಮಿಳುನಾಡು ಗಡಿ ದಾಟಿ ಆಂಧ್ರಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆ ಟ್ರಕ್ ತಡೆದು ಬಳಿಕ ಚಾಲಕನಿಗೆ ಥಳಿಸಿ, ಬಲವಂತವಾಗಿ ಕೆಳಗಿಳಿಸಿ ಹೈಜಾಕ್ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ನೀಡಿದ ದೂರಿನಂತೆ ಆಂಧ್ರಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಿಶೇಷ ಪೊಲೀಸ್ ತಂಡ ರಚನೆ ಮಾಡಿ ಟ್ರಕ್ ಪತ್ತೆ ಕಾರ್ಯಾಚರಣೆಗೆ ಇಳಿದಿದ್ದು, ಟ್ರಕ್ ಚೆನ್ನೈ-ತಿರುಪತಿ ಹೆದ್ದಾರಿಯಲ್ಲಿ ಪತ್ತೆಯಾಗಿದೆ ಎಂದು ತಿಳೀದು ಬಂದಿದೆ.
ಟ್ರಕ್ನಲ್ಲಿದ್ದ ಸುಮಾರು 6 ಕೋಟಿ ರೂ. ಮೌಲ್ಯದ ಪೋನ್ ಗಳನ್ನು ದರೊಡೆಕೋರರು ಲೂಟಿ ಮಾಡಿದ್ದಾರೆ. ಮತ್ತೊಂದು ವಾಹನದಲ್ಲಿ ಮೊಬೈಲ್ಗಳನ್ನು ತುಂಬಿಕೊಂಡು ಟ್ರಕ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.