ನವದೆಹಲಿ, ಆ.27(DaijiworldNews/HR): ಕೊರೊನಾ ಸೋಂಕು ನಿಯಂತ್ರಿಸಲು ಲಸಿಕೆಯನ್ನು ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾದ ಕಾರಣ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸರ್ಕಾರದ ಪೂರ್ವಸಿದ್ಧತೆ ಆತಂಕಕಾರಿಯಾಗಿದ್ದು, ದೇಶದಲ್ಲಿ ಕೊರೊನಾ ಸೋಂಕು ಕಡಿಮೆಗೊಳಿಸಲು ಈ ವೇಳೆಗಾಗಲೇ ಲಸಿಕೆ ಲಭ್ಯವಿರಬೇಕಿತ್ತು. ಆದರೆ ಯಾವುದೇ ಲಕ್ಷಣಗಳು ಇನ್ನೂ ಕಂಡುಬಂದಿಲ್ಲ, ಹಾಗಾಗಿ ಭಾರತ ಸರ್ಕಾರದ ಪೂರ್ವಸಿದ್ಧತೆ ಆತಂಕಕಾರಿ ಎಂದು ಹೇಳಿದ್ದಾರೆ.
ಕೊರೊನಾದಿಂದ ದೇಶದ ಜನತೆಯನ್ನು ರಕ್ಷಿಸಲು ನ್ಯಾಯಯುತ ಲಸಿಕೆ ತಂತ್ರವು ಈಗ ಜಾರಿಯಲ್ಲಿರಬೇಕು. ಆದರೆ ಅದರ ಯಾವುದೇ ಲಕ್ಷಣಗಳು ಇನ್ನೂ ಗೋಚರಿಸುತ್ತಿಲ್ಲ, ಸರ್ಕಾರ ಜನರಿಗೆ ಕಡಿಮೆ ಬೆಲೆಯಲ್ಲಿ ದೊರಕುವಂತ ಲಸಿಕೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.