ನವದೆಹಲಿ, ಆ 27 (Daijiworld News/MSP): ಕೋವಿಡ್ 19 ಸಾಂಕ್ರಾಮಿಕ ರೋಗದ ಮಧ್ಯೆ ದೇಶದೆಲ್ಲೆಡೆ ಮೊಹರಂ ಹಬ್ಬದ ಮೆರವಣಿಗೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನಿರಾಕರಿಸಿದೆ.
ಸಿಜೆಐ ಎಸ್ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯುನ್ ಅವರ ನ್ಯಾಯಪೀಠವು " ದೇಶಾದ್ಯಂತ ಮೆರವಣಿಗೆಯನ್ನು ನಡೆಸಲು ಅನುಮತಿ ಕೊಟ್ಟರೆ ಅವ್ಯವಸ್ಥೆಗೆ ಉಂಟಾಗಲಿದೆ ಮತ್ತು ನಿರ್ದಿಷ್ಟ ಸಮುದಾಯವನ್ನು ಕೋವಿಡ್ ಹರಡಿದ ಕಾರಣಕ್ಕೆ ಗುರಿಯಾಗಿಸಲಾಗುತ್ತದೆ ಹಾಗಾಗುವುದು ಬೇಡ" ಎಂದು ಅಭಿಪ್ರಾಯಪಟ್ಟರು.
ಮೊಹರಂ ಮೆರವಣಿಗೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ , ಅರ್ಜಿದಾರರು ಪುರಿಯ ಜಗನ್ನಾಥ ರಥಯಾತ್ರೆ ಮೆರವಣಿಗೆಯನ್ನು ನಡೆಸಲು ಸುಪ್ರೀಂ ಅನುಮತಿ ನೀಡಿದನ್ನು ಉಲ್ಲೇಖಿಸಿದ್ದರು.