ನವದೆಹಲಿ, ಆ.27(DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವದಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ರೂ.2.50ಕ್ಕೆ ಲಭ್ಯವಾಗುತ್ತಿರುವ ಮಹಿಳೆಯರ ಸ್ಯಾನಿಟರಿ ಪ್ಯಾಡ್ ಗಳನ್ನು ಇನ್ನು ಮುಂದೆ ರೂ.1ಕ್ಕೆ ಲಭ್ಯವಾಗಲಿದೆ ಎಂಬುದಾಗಿ ಘೋಷಿಸಿದ್ದು, . ಈ ಮೂಲಕ ಮಹಿಳೆಯರಿಗೆ ಕೇಂದ್ರ ಸರ್ಕಾರ ಬಂಫರ್ ಗಿಫ್ಟ್ ನೀಡಿತ್ತು. ಇದೀಗ ಇಂದಿನಿಂದ ಭಾರತದ ಎಲ್ಲಾ ಜನ ಔಷಧಿ ಕೇಂದ್ರಗಳಲ್ಲಿ ರೂ.1ಕ್ಕೆ ಸ್ಯಾನಿಟರಿ ಪ್ಯಾಡ್ ಗಳು ದೊರೆಯಲಿವೆ ಎಂದು ತಿಳಿದು ಬಂದಿದೆ.
ಈ ಹಿಂದೆ ಜೈವಿಕ ವಿಘಟನೀಯ ಕರವಸ್ತ್ರಗಳು ಜನ ಔಷಧಿ ಕೇಂದ್ರಗಳಲ್ಲಿ ಸುವಿಧಾ ಎಂಬ ಹೆಸರಿನಲ್ಲಿ ರೂ.2.50ಕ್ಕೆ ಮಾರಾಟ ಮಾಡಲಾಗುತ್ತಿದ್ದು, 4 ಸ್ಯಾನಿಟರಿ ಪ್ಯಾಡ್ ಗಳನ್ನು ರೂ.10ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಪ್ರಧಾನಿ ಮೋದಿಯವರು ಆಗಸ್ಟ್ 15ರಂದು ಭಾಷಣದ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯದ ಉದ್ದೇಶದಿಂದ ಸ್ಯಾನಿಟರಿ ಪ್ಯಾಡ್ ಗಳ ರೂ.2.50ರ ಬೆಲೆಯಲ್ಲಿ 1.50ಪೈಸೆ ಕಡಿತ ಮಾಡುವುದಾಗಿ ಘೋಷಿಸಿದ್ದು, ಈ ಮೂಲಕ ರೂ.1ಕ್ಕೆ ಸ್ಯಾನಿಟರಿ ಪ್ಯಾಡ್ ಗಳು ದೊರೆಯಲಿವೆ ಎಂಬುದಾಗಿ ತಿಳಿಸಿದ್ದರು.
ಮೋದಿಯವರು ಘೋಷಿಸಿದ್ದ ರೂ.1ರ ಸ್ಯಾನಿಟರಿ ಪ್ಯಾಡ್ ಗಳು ಇಂದಿನಿಂದ ಜಾರಿಗೆ ಬಂದಿದ್ದು, ಭಾರತದ ಎಲ್ಲಾ ಜನ ಔಷಧಿ ಕೇಂದ್ರಗಳಲ್ಲಿ ಲಭ್ಯವಾಗಲಿವೆ. 4 ಸ್ಯಾಟನಿಟರಿ ಪ್ಯಾಡ್ ಸುವಿಧಾ ಪ್ಯಾಕೇಟ್ ಈ ಮೊದಲು ರೂ.10ಕ್ಕೆ ಸಿಗುತ್ತಿದ್ದದ್ದು, ಇದೀಗ ಕೇವಲ ನಾಲ್ಕು ರೂಪಾಯಿಗೆ ಲಭ್ಯವಾಗಲಿದ್ದು, ಮಹಿಳೆಯರಿಗೆ ಕೇಂದ್ರ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ.