ನವದೆಹಲಿ, ಆ 28 (DaijiworldNews/PY): ನೀಟ್ ಹಾಗೂ ಜೆಇಇ ಪರೀಕ್ಷೆಗಳ ಗೊಂದಲಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳು ದ್ರೌಪದಿ, ಸಿಎಂಗಳು ಕೃಷ್ಣ, ವಿದುರನಾಗಿ ನಾನು ಎಂದು ಬಿಜೆಪಿ ಮುಖಂಡ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನೀಟ್ ಹಾಗೂ ಜೆಇಇ ಪರೀಕ್ಷೆಯ ವಿಷಯದಲ್ಲಿ, ದ್ರೌಪದಿಯ ವಿಚಾರದಲ್ಲಾದಂತೆ ವಿದ್ಯಾರ್ಥಿಗಳನ್ನು ನಿರಾಕರಿಸಲಾಗುತ್ತಿದೆಯೇ? ದ್ರೌಪದಿಯ ವಸ್ತ್ರಾಪಹರಣ ಮಾಡಿದ ಸಂದರ್ಭ ಆಕೆಗೆ ವಸ್ತ್ರವನ್ನು ನೀಡಿದ ಕೃಷ್ಣನ ಪಾತ್ರವನ್ನು ಮುಖ್ಯಮಂತ್ರಿಗಳು ಮಾಡಲಿ. ನಾನು ವಿದ್ಯಾರ್ಥಿಯಾಗಿ ಹಾಗೂ ನಂತರ ಪ್ರಾಧ್ಯಾಪಕನಾಗಿ 60 ವರ್ಷಗಳ ಅನುಭವದಲ್ಲಿ ಮುಂಬರುವ ದಿನಗಳಲ್ಲಿ ಏನೋ ತಪ್ಪಾಗಬಹುದು ಎಂದನಿಸುತ್ತಿದ್ದು, ನನಗೆ ಸದ್ಯ ವಿದುರನಂತೆ ಅನುಭವವಾಗುತ್ತಿದೆ ಎಂದು ತಿಳಿಸಿದ್ದಾರೆ.
ಆಯಾ ರಾಜ್ಯಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿಗಳನ್ನು ತಮ್ಮ ಮನೆಗೆ ಸುರಕ್ಷಿತವಾಗಿ ಕೊಂಡೊಯ್ಯುವಂತ ಗ್ಯಾರಂಟಿಯನ್ನು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ನೀಡುತ್ತಾರೆಯೇ? ಅವರಿಗೆ ಸಾಧ್ಯವಾಗದಿದ್ದರೆ, ಅದನ್ನು ಅವರು ಸಾರ್ವಜನಿಕವಾಗಿ ಹೇಳಬೇಕು ಹಾಗೂ ಪರೀಕ್ಷೆಯನ್ನು ನಾವು ನಡೆಸುವುದಿಲ್ಲ ಎಂದು ಪ್ರಧಾನ ಮಂತ್ರಿಗೆ ಹೇಳಲಿ. ಆಗ ಅವರು ಅದನ್ನು ಸಮನ್ವಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.