ನವದೆಹಲಿ, ಆ. 28 (DaijiworldNews/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ನಿಷೇಧ ಹೇರಲಾಗಿದ್ದ ವಿಮಾನ ಸಂಚಾರ ಮತ್ತೆ ಆರಂಭದ ಬಳಿಕ ವಿಮಾನಗಳಲ್ಲಿ ಆಹಾರ ಸರಬರಾಜಿಗೆ ನಿರ್ಬಂಧ ಮಾಡಲಾಗಿದ್ದು ಇದೀಗ ಕೇಂದ್ರ ವಿಮಾನಯಾನ ಸಚಿವಾಲಯ ಈ ಆದೇಶವನ್ನು ಹಿಂಪಡೆದು ವಿಮಾನಗಳಲ್ಲಿ ಆಹಾರ ಸರಬರಾಜಿಗೆ ಅವಕಾಶ ನೀಡಿದೆ.
ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಪ್ಯಾಕ್ ಮಾಡಿದ ತಿಂಡಿಗಳು, ಊಟ ಮತ್ತು ಪಾನೀಯಗಳನ್ನು ಸರಬರಾಜು ಮಾಡಲು ಅನುಮತಿ ನೀಡಲಾಗಿದ್ದು ಅಂತರಾಷ್ಟ್ರೀಯ ವಿಮಾನಗಳಲ್ಲಿ ಬಿಸಿಯೂಟ ಸರಬರಾಜಿಗೂ ಸಮ್ಮತಿ ಸೂಚಿಸಿದೆ.
ಸಿಂಗಲ್ ಯೂಸ್ ಟ್ರೇ, ಪ್ಲೇಟ್ಗಳನ್ನು ಬಳಕೆ ಮಾಡಿ ಆಹಾರ ಸರಬರಾಜು ಮಾಡಬೇಕು. ಆಹಾರ ಸರಬರಾಜು ಮಾಡುವ ಸಿಬ್ಬಂದಿಯೂ ಪ್ರತಿ ಬಾರಿಯೂ ತನ್ನ ಗ್ಲೌಸ್ ಬದಲಾವಣೆ ಮಾಡಬೇಕು ಎಂದು ಸಚಿವಾಲಯ ತಿಳಿಸಿದ್ದು ಇದೇ ಸಂದರ್ಭದಲ್ಲಿ ಮಾಸ್ಕ್ ಧರಿಸಲು ಪ್ರಯಾಣಿಕ ನಿರಾಕರಿಸದರೆ, ಆ ಪ್ರಯಾಣಿಕರ ಸಂಚಾರಕ್ಕೆ ನಿಷೇಧ ವಿಧಿಸುವ ಸಂಸ್ಥೆಗಳಿಗೆ ತಿಳಿಸಲಾಗಿದೆ.
ಕೊರೊನಾ ಲಾಕ್ಡೌನ್ ಬಳಿಕ ಕಳೆದ ಮೇ. 25ರಿಂದ ವಿಮಾನ ಸಂಚಾರವನ್ನು ಮತ್ತೆ ಆರಂಭಿಸಲಾಗಿದ್ದು ಇದೀಗ ಆಹಾರ ಸರಬರಾಜಿಗೆ ಅವಕಾಶ ನೀಡಲಾಗಿದೆ.