ಹುಬ್ಬಳ್ಳಿ, ಆ. 28 (DaijiworldNews/MB) : ''ನಾವು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬಂದ ಬಳಿಕ ನಾವು ಈಗ ಇರುವ ಪಕ್ಷಕ್ಕೆ ತಕ್ಕಂತೆ ನಡೆಯಬೇಕು. ವಿಶ್ವನಾಥ್ ಅವರು ಅನಗತ್ಯವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುಬಾರದು'' ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ವಿಶ್ವನಾಥ್ ಅವರು ಯಾವ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಹೇಳಿಕೆ ನೀಡಿದ್ದಾರೆ ತಿಳಿದಿಲ್ಲ. ಈಗ ಅವರು ಬಿಜೆಪಿಯಲ್ಲಿ ಇರುವಾಗ ಪಕ್ಷದ ಸಿದ್ದಾಂತಕ್ಕೆ ತಕ್ಕಂತೆ ಇರಬೇಕು'' ಎಂದು ತಿಳಿಸಿದ್ದಾರೆ.
''ನಾನು ಅವರಿಗೆ ಗುರುವಾರ ಕರೆ ಮಾಡಿದೆ, ಆದರೆ ಸಿಗಲಿಲ್ಲ. ಯಾರೂ ಕೂಡಾ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು'' ಎಂದು ಹೇಳಿದ್ದಾರೆ.
''ಟಿಪ್ಪು ಈ ನೆಲದ ಮಣ್ಣಿನ ಮಗ, ಯಾವುದೇ ಪಕ್ಷ, ಧರ್ಮಕ್ಕೆ ಸೇರಿದವನಲ್ಲ'' ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಹೇಳಿದ್ದರು.