ನವದೆಹಲಿ, ಆ 28 (DaijiworldNews/PY): ಸರ್ಕಾರದ ವೈಫ್ಯಲ್ಯಗಳಿಗೆ ನೀಟ್, ಜೆಇಇ ಆಕಾಂಕ್ಷಿಗಳ ಹಿತ ಹಾಳಾಗಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬಗ್ಗೆ ಟ್ವೀಟ್ ಮಾಡಿರುವ ಅವರು, ಸರ್ಕಾರದ ವೈಫ್ಯಲ್ಯಗಳಿಗೆ ನೀಟ್, ಜೆಇಇ ಆಕಾಂಕ್ಷಿಗಳ ಹಿತ ಹಾಳಾಗಬಾರದು. ಸರ್ಕಾರ ಎಲ್ಲರ ಅಭಿಪ್ರಾಯವನ್ನು ಆಲಿಸಬೇಕು. ನಂತರ ಒಮ್ಮತದ ತೀರ್ಮಾನ ಕೈಗೊಳ್ಳಬೇಕು ಎಂದಿದ್ದಾರೆ.
ಟ್ವೀಟ್ನಲ್ಲಿ ವಿಡಿಯೋ ಮೂಲಕ ಸಂದೇಶ ನೀಡಿದ ಅವರು, ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದು, ಅವರು ದೇಶದ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ. ವಿದ್ಯಾರ್ಥಿಗಳ ಮೇಲೆ ಸರ್ಕಾರ ಏಕೆ ಒತ್ತಡ ಹೇರಬೇಕು? ಇದಕ್ಕೂ ಮೊದಲು ಸರ್ಕಾರ ವಿದ್ಯಾರ್ಥೀಗಳ ಅಭಿಪ್ರಾಯವನ್ನು ಆಲಿಸಬೇಕು ಎಂದಿದ್ದಾರೆ.
ಸೆ.1ರಿಂದ 6ರವರೆಗೆ ಜೆಇಇ ಪರೀಕ್ಷೆ ಹಾಗೂ ಸೆ.13ರಿಂದ ನೀಟ್ ಪರೀಕ್ಷೆ ನಡೆಯಲಿದೆ. ಈ ನಡುವೆ ಸುಪ್ರೀಂ ಕೋರ್ಟ್ ಪರೀಕ್ಷೆ ಮುಂದೂಡಿ ಎಂದು ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯನ್ನು ತಳ್ಳಿಹಾಕಿದ್ದು, ವಿದ್ಯಾರ್ಥಿಗಳೇ ನೀವು ಒಂದು ವರ್ಷವನ್ನು ಹಾಳುಗೆಡವಲು ತಯಾರಿದ್ದೀರಾ? ಎಂದು ಕೇಳಿತ್ತು.