ನವದೆಹಲಿ, ಆ 28(DaijiworldNews/HR): ಕಳೆದ ಜೂನ್-ಜುಲೈ ತಿಂಗಳಲ್ಲಿ ನಿರಂತರವಾಗಿ ಇಂಧನದ ಬೆಲೆ ಹೆಚ್ಚಿಸಿದ ತೈಲ ಕಂಪೆನಿಗಳು ಮತ್ತೆ ಅದೇ ರೀತಿಯಾಗಿ ಮುಂದುವರೆಸಿ, ಕಳೆದ 13 ದಿನಗಳಲ್ಲಿ 11 ಬಾರಿ ಪೆಟ್ರೋಲ್ ಬೆಲೆ ಹೆಚ್ಚಿಸಿದೆ.
ಆ.16ರಿಂದ ಪೆಟ್ರೋಲ್ ಬೆಲೆ ಏರಿಕೆ ಆರಂಭವಾಗಿದ್ದು, ಆಗಸ್ಟ್ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14 ಪೈಸೆ, ಆ. 17ರಂದು 16 ಪೈಸೆ, ಆ.18ರಂದು 17 ಪೈಸೆ ಏರಿಸಲಾಗಿದ್ದು, ಮತ್ತೆ ಆಗಸ್ಟ್ 20ರಿಂದ ಬೆಲೆ ಏರಿಕೆ ಆರಂಭವಾಗುತ್ತಲೆ ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 46 ಡಾಲರ್ ನಷ್ಟಿದೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 10 ಪೈಸೆ ಹೆಚ್ಚಳವಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಾಗಿದ್ದರೂ ಕೊರೊನಾ ಲಾಕ್ ಡೌನ್ ನಿಂದಾಗಿ ಜನ ಸಾಮಾನ್ಯರು ಎಷ್ಟೇ ಕಷ್ಟದಲ್ಲಿದ್ದರೂ ರಾಜಕೀಯ ನಾಯಕರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸುತ್ತಿದ್ದರೂ ಅದನ್ನು ಪರಿಗಣಿಸದ ಕೇಂದ್ರ ಪೆಟ್ರೊಲ್ ಬೆಲೆಯನ್ನು ಹೆಚ್ಚಳ ಮಾಡಿ ಜನರಿಗೆ ನಿತ್ಯ ಬರೆ ಹಾಕುತ್ತಿದೆ.