ದೊಡ್ಡಬಳ್ಳಾಪುರ, ಆ 29 (DaijiworldNews/PY): ಆನ್ಲೈನ್ ತರಗತಿ ನಡೆಯುತ್ತಿದ್ದ ಸಂದರ್ಭ ಸೀರೆಯಿಂದ ಕಟ್ಟಿದ್ದ ಜೋಳಿಗೆ ಬಾಲಕನ ಕುತ್ತಿಗೆಗೆ ಬಿಗಿದು ಸಾವನ್ನಪ್ಪಿದ ಘಟನೆ ದರ್ಗಾಜೋಗಹಳ್ಳಿಯಲ್ಲಿ ನಡೆದಿದೆ.
ಮೃತ ಬಾಲಕನನ್ನು ದರ್ಗಾಜೋಗಳ್ಳಿಯ ಮಂಜುನಾಥ್ ಅವರ ಪುತ್ರ ವಿಶ್ವಾಸ್(10) ಎನ್ನಲಾಗಿದೆ.
ಈತ ಕೊಡಿಗೆಹಳ್ಳಿ ಸಹ್ಯಾದ್ರಿ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಕೊರೊನಾ ಕಾರಣದಿಂದ ಆನ್ಲೈನ್ ಕ್ಲಾಸ್ ಮೂಲಕ ತರಗತಿ ಮಾಡಲಾಗುತ್ತಿದ್ದು, ಶುಕ್ರವಾರದಂದು ಮಧ್ಯಾಹ್ನ ಮೂರು ಗಂಟೆ ವೇಳೆಗೆ ಆನ್ಲೈನ್ ಕ್ಲಾಸ್ ಇದ್ದ ಕಾರಣ ಆತನ ಪೋಷಕರು ಆತನನ್ನು ರೂಂಗೆ ಕಳುಹಿಸಿದ್ದಾರೆ.
ಮನೆಯಲ್ಲಿ ಪುಟ್ಟ ಮಗುವಿದ್ದ ಕಾರಣ ಸೀರೆಯಿಂದ ಜೋಳಿಗೆ ಕಟ್ಟಲಾಗಿದ್ದು, ವಿಶ್ವಾಸ್ ಅದರಲ್ಲೇ ಕುಳಿತು ಪಾಠ ಕೇಳುತ್ತಿದ್ದ. ಪಾಠ ಕೇಳಲು ಕೋಣೆಗೆ ಹೋಗಿದ್ದ ವಿಶ್ವಾಸ್ ಇನ್ನೂ ಕೋಣೆಯಿಂದ ಯಾಕೆ ಬಂದಿಲ್ಲ ಎಂದು ಪೋಷಕರು ರೂಂ ನ ಒಳಗೆ ಹೋಗಿ ನೋಡಿದಾಗ ಜೋಳಿಗೆ ಕತ್ತಿಗೆ ಬಿಗಿದಿ ಬಾಲಕ ಸಾವನ್ನಪ್ಪಿರುವುದು ಕಂಡುಬಂದಿದೆ.
ಘಟನೆಯ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.