ಬೆಂಗಳೂರು, ಆ 29(DaijiworldNews/HR): 11 ತಿಂಗಳಲ್ಲಿ 101 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬುಲೆಟ್ ಬೈಕ್ ಮಾಲೀಕ ಎಲ್ ರಾಜೇಶ್(25)ಎಂಬವರಿಗೆ 57 ಸಾವಿರ ರೂ ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜೇಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ದಂಡದ ಮೊತ್ತವನ್ನು ಹೊಂದಿಸಲು ಮೂರು ದಿನಗಳ ಸಮಯಾವಕಾಶವನ್ನು ಪಡೆದಿದ್ದರು.
57 ಸಾವಿರ ರೂ ದಂಡ ಕಟ್ಟುವುದರೊಂದಿಗೆ ಅತಿ ಹೆಚ್ಚು ದಂಡವನ್ನು ಕಟ್ಟಿದ ವಾಹನ ಸವಾರ ಎನಿಸಿಕೊಂಡಿದ್ದಾರೆ ರಾಜೇಶ್. ಡಿಸೆಂಬರ್ 2019ರಲ್ಲಿ ತರಕಾರಿ ಅಂಗಡಿ ಮಾಲೀಕರೊಬ್ಬರು 15,200 ರೂ. ದಂಡ ಕಟ್ಟಿದ್ದರು. ಚಲನ್ 5.1 ಅಡಿಯಷ್ಟು ಉದ್ದವಿತ್ತು.
ರಾಜೇಶ್ ವೈಟ್ಫೀಲ್ಡ್ನಲ್ಲಿ ಕೆಲಸ ಮಾಡುತ್ತಿದ್ದು,. ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿಗೆ ನಿತ್ಯ ಓಡಾಡುತ್ತಿರುತ್ತಾರೆ. ಅಂತೆಯೇ ಬುಧವಾರವೂ ಬಂದಿದ್ದರು, ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರನ್ನು ತಡೆದಿದ್ದಾರೆ.
ಇನ್ನು ಆತ ಅದೇ ದಿನ ಆರು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಎಂದು ತಿಳಿಯಿತು. ಕೋರ್ಟ್ಗೆ 57 ಸಾವಿರ ಮೊತ್ತವನ್ನು ಕಟ್ಟಿದ ಬಳಿಕ ಆ ಗಾಡಿಯನ್ನು ನೀಡಲಾಗುತ್ತದೆ.