ನವದೆಹಲಿ, ಆ 29 (DaijiworldNews/PY): ಇಂದು ರಾಷ್ಟ್ರೀಯ ಕ್ರೀಡಾ ದಿನವಾಗಿದ್ದು, ಮೇಜರ್ ಧ್ಯಾನ ಚಂದ್ ಅವರಿಗೆ ಗೌರವ ಸಲ್ಲಿಸುತ್ತಿದ್ದು, ಹಾಕಿ ಸ್ಟಿಕ್ನೊಂದಿಗಿನ ಅವರ ಜಾದೂವನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಧ್ಯಾನ್ ಚಂದ್ ಅವರ 115ನೇ ಜನ್ಮ ದಿನಾಚರಣೆ, ರಾಷ್ಟ್ರೀಯ ಕ್ರೀಡಾ ದಿನ ಟ್ವೀಟ್ ಮಾಡಿದ ಪ್ರಧಾನಿ ಮೋದಿ ಅವರು, ಇಂದು ರಾಷ್ಟ್ರೀಯ ಕ್ರೀಡಾ ದಿನವಾಗಿದ್ದು, ಮೇಜರ್ ಧ್ಯಾನ ಚಂದ್ ಅವರಿಗೆ ಗೌರವ ಸಲ್ಲಿಸುತ್ತಿದ್ದು, ಹಾಕಿ ಸ್ಟಿಕ್ನೊಂದಿಗಿನ ಅವರ ಜಾದೂವನ್ನು ಎಂದಿಗೂ ಮರೆಯಲಾಗುವುದಿಲ್ಲ. ನಮ್ಮ ಪ್ರತಿಭಾವಂತ ಕ್ರೀಡಾಪಟುಗಳ ಯಶಸ್ಸಿಗೆ ಕುಟುಂಬಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ನೀಡಿದ ಅತ್ಯುತ್ತಮ ಬೆಂಬಲವನ್ನು ಶ್ಲಾಘಿಸುವ ದಿನವೂ ಇದಾಗಿದೆ ಎಂದಿದ್ದಾರೆ.
ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಮತ್ತು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ ಎಲ್ಲ ಕ್ರೀಡಾಪಟುಗಳ ಅದ್ಭುತ ಸಾಧನೆಗಳನ್ನು ಆಚರಿಸುವ ದಿನ ರಾಷ್ಟ್ರೀಯ ಕ್ರೀಡಾ ದಿನವಾಗಿದೆ. ಅವರ ಸ್ಥಿರತೆ ಮತ್ತು ದೃಢ ನಿಶ್ಚಯವು ಅತ್ಯುತ್ತಮವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಭಾರತದಲ್ಲಿ ಕ್ರೀಡೆಯನ್ನು ಜನಪ್ರಿಯಗೊಳಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಬೆಂಬಲಿಸಲು ಭಾರತ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಅದೇ ಸಮಯದಲ್ಲಿ, ಪ್ರತಿಯೊಬ್ಬರೂ ಕ್ರೀಡೆ ಮತ್ತು ವ್ಯಾಯಾಮವನ್ನು ತಮ್ಮ ದೈನಂದಿನ ದಿನಚರಿಯನ್ನಾಗಿ ಎಂದು ನಾನು ವಿನಂತಿಸುತ್ತೇನೆ. ಹೀಗೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಎಲ್ಲರೂ ಸಂತೋಷದಿಂದ ಹಾಗೂ ಆರೋಗ್ಯವಾಗಿರಿ! ಎಂದು ತಿಳಿಸಿದ್ದಾರೆ.
ಆಗಸ್ಟ್ 29 ಧ್ಯಾನ್ ಚಂದ್ ಅವರ ಹುಟ್ಟಿದ ದಿನವಾಗಿದ್ದು, ಈ ದಿನವನ್ನು ದೇಶದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಎಂದು ಆಚರಿಸಲಾಗುತ್ತಿದೆ.