ಬೆಂಗಳೂರು, ಆ 29 (DaijiworldNews/PY): ಸಿ.ಟಿ. ರವಿ ಅವರು ತಾವು ಸಚಿವರು ಎನ್ನುವ ವಿಚಾರವನ್ನು ಮರೆತಿದ್ದಾರೆ ಅನ್ನಿಸುತ್ತಿದೆ. ರಾಯಣ್ಣನ ವಿಚಾರವಾಗಿ ರಾಜಕೀಯ ಬಣ್ಣ ಬಳಿಯುವ ಕಾರ್ಯ ಮಾಡಬೇಕಿತ್ತಾ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಣ್ಣನ ವಿಚಾರವಾಗಿ ಅದಕ್ಕೆ ರಾಜಕೀಯ ಬಣ್ಣ ಬಳೆಯುವ ಕಾರ್ಯವನ್ನು ಮಾಡಬೇಕಿತ್ತಾ? ಸಿ.ಟಿ. ರವಿ ಅವರು ತಾವು ಸಚಿವರು ಎನ್ನುವ ವಿಚಾರವನ್ನು ಮರೆತಿದ್ದಾರೆ ಅನ್ನಿಸುತ್ತಿದೆ. ತಮ್ಮ ಸ್ಥಾನಕ್ಕೆ ತಕ್ಕಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಬಳಿಕ ಡಿಜೆ ಹಳ್ಳಿ ಗಲಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ತನಿಖೆ ಕೈಗೊಳ್ಳಬೇಕು. ಈ ಘಟನೆಯ ಹಿಂದೆ ಯಾರೇ ಇದ್ದರೂ ಅವರು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕು, ಇನ್ನು ಎರಡು-ಮೂರು ದಿನಗಳಲ್ಲಿ ನಾನು ಡಿಜೆ ಹಳ್ಳಿ, ಕೆಜೆ ಹಳ್ಳಿಗೆ ಹೋಗುತ್ತೇನೆ ಎಂದು ತಿಳಿಸಿದರು.
ಸರ್ಕಾರದ ಸಚಿವರು ಬೇಜವಾಬ್ದಾರಿಯಾದ ಹೇಳಿಕೆ ನೀಡುತ್ತಿದ್ದು, ಇಂತಹ ಹೇಳಿಕೆಗಳಿಂದ ತನಿಖೆಯ ಮೇಲೆ ಪ್ರಭಾವ ಉಂಟಾಗಬಹುದು. ಇನ್ನು ಅಖಂಡ ಶ್ರೀನಿವಾಸ ಮೂರ್ತಿ ಅವರು ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಲು ನೋಡುತ್ತಿದ್ದಾರೆ. ಸರ್ಕಾರ ಸೂಕ್ತವಾದ ಕ್ರಮ ಕೈಗೊಳ್ಳುತ್ತಿದ್ದರೆ ಹಾನಿಯನ್ನು ತಪ್ಪಿಸುವಂತೆ ಮಾಡಬಹುದಾಗಿತ್ತು ಎಂದರು.
ಸೋಮವಾರ ಅಥವಾ ಮಂಗಳವಾರ ನಾನು ಡಿಜೆ ಹಳ್ಳಿಗೆ ಭೇಟಿ ನೀಡುತ್ತೇನೆ. ಅಲ್ಲಿರುವ ಜನ ಅಮಾಯಕರು ಎನ್ನುವ ಬಗ್ಗೆ ತಿಳಿದಿಲ್ಲ. ಆದರೆ, ಅಲ್ಲಿನ ಜನರು ಬಡವರಾಗಿದ್ದು, ಅವರಗೆ ಪರಿಹಾರ ನೀಡುವುದಾಗಿ ನಮ್ಮೊಂದಿಗೆ ಜಮೀರ್ ತಿಳಿಸಿದ್ದಾರೆ ಎಂದು ಹೇಳಿದರು.
ನಾನು ಸೋಮವಾರ ಅಥವಾ ಮಂಗಳವಾರ ಭೇಟಿ ನೀಡ್ತೇನೆ. ಅಲ್ಲಿರುವವರು ಅಮಾಯಕರೋ ಅಲ್ವೋ ..? ಅನ್ನೋದು ಗೊತ್ತಿಲ್ಲ. ಆದರೆ ಅವರು ಬಡವರಾಗಿದ್ದು, ಪರಿಹಾರ ಕೊಡುತ್ತಿದ್ದೇನೆ ಅಂತ ಜಮೀರ್ ನಮ್ಮ ಜೊತೆ ಹೇಳಿದ್ದಾರೆ ಎಂದು ತಿಳಿಸಿದರು.