ಬೆಂಗಳೂರು, ಆ. 29 (DaijiworldNews/MB) : ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳ ನೋಟಿಸ್ ನೀಡಿದೆ.
ನೊಟೀಸ್ ನೀಡಿರುವ ಸಿಸಿಬಿ, ಡ್ರಗ್ಸ್ ದಂಧೆ ಬಗ್ಗೆ ಮಾಹಿತಿ ನೀಡುವ ಮೂಲಕ ಡ್ರಗ್ಸ್ ದಂಧೆ ವಿರುದ್ದದ ಬೆಂಗಳೂರು ಪೊಲೀಸರ ಹೋರಾಟಕ್ಕೆ ಜೊತೆಯಾಗಿ ಎಂದು ತಿಳಿಸಿದೆ.
ಇಂದ್ರಜೀತ್ ಲಂಕೇಶ್ ಅವರು, ಸ್ಯಾಂಡಲ್ ವುಡ್ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದ್ದು ನನಗೆ ತಿಳಿದಿರುವ ಸ್ಟಾರ್ ನಟರು, ನಟರು ಯಾರೂ ಕೂಡಾ ಇದನ್ನು ನಡೆಸುತ್ತಿಲ್ಲ. ಆದರೆ ಇದ್ದಕ್ಕಿದ್ದಂತೆ ಪ್ರಚಾರ ಗಳಿಸಿದ ಯುವ ನಟ-ನಟಿಯರು ಈ ಥರಹದ ಪಾರ್ಟಿಗಳನ್ನು ಮಾಡುತ್ತಾರೆ. ಇದರಲ್ಲಿ ನಟಿಯರು ಹೆಚ್ಚಾಗಿ ಇದ್ದಾರೆ. ನನಗೆ ಭದ್ರತೆ ನೀಡಿದರೆ ಈ ಬಗ್ಗೆ ಹೇಳುತ್ತೇನೆ ಎಂದು ಹೇಳಿದ್ದರು.