ನವದೆಹಲಿ, ಆ. 29 (DaijiworldNews/MB) : ಕೊರೊನಾ ಲಾಕ್ಡೌನ್ ಬಳಿಕ ಅನ್ಲಾಕ್ ಪ್ರಕ್ರಿಯೆ ನಡೆಸುತ್ತಿರುವ ಕೇಂದ್ರ ಸರ್ಕಾರವು ಅನ್ಲಾಕ್ 4 ರ ಅನ್ಲಾಕ್ 4 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಅಂತರ್ರಾಜ್ಯ ಸಂಚಾರಕ್ಕೆ ನಿರ್ಬಂಧವನ್ನು ವಿಧಿಸುವಂತಿಲ್ಲ ಎಂದು ಕೇಂದ್ರ ತಿಳಿಸಿದೆ.
ಸೆ.7ರಿಂದ ಮೆಟ್ರೋ ಸೇವೆಗೆ ಅನುಮತಿ ನೀಡಿಲಾಗಿದ್ದು ಕಂಟೈನ್ಮೆಂಟ್ ಝೋನ್ಗಳಲ್ಲಿ ಮಾತ್ರ ಲಾಕ್ಡೌನ್ ಇರಲಿದೆ. ಹಾಗೆಯೇ ಯಾವುದೇ ರಾಜ್ಯಗಳು ಮತ್ತೆ ಲಾಕ್ಡೌನ್ ಮಾಡಲು ಅವಕಾಶವಿಲ್ಲ.
ಈ ಮಾರ್ಗಸೂಚಿ ಪ್ರಕಾರವಾಗಿ ಅಂತರ್ರಾಜ್ಯ ಸಂಚಾರಕ್ಕೆ ನಿರ್ಬಂಧವನ್ನು ವಿಧಿಸುವಂತಿಲ್ಲ. ಆನ್ಲೈನ್ ಶಿಕ್ಷಣ ಮುಂದುವರಿಯಲಿದೆ. ಬಯಲು ರಂಗಮಂದಿರಕ್ಕೆ ಅವಕಾಶ ನೀಡಲಾಗಿದ್ದು ಸಭೆ, ಸಮಾರಂಭಗಳಿಗೆ 100 ಜನ ಸೇರಲು ಅವಕಾಶ ನೀಡಲಾಗಿದೆ. ಹಾಗೆಯೇ ರಿಸರ್ಚ್ಸ್ ಗಳಿಗೆ ಅವಕಾಶ ನೀಡಲಾಗಿದೆ.
ಇನ್ನು ಸಿನಿಮಾಮಂದಿರ, ಮಲ್ಟಿಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್ ತೆರೆಯಲು ಅವಕಾಶ ನೀಡಿಲ್ಲ. ಸೆ.30ರವರೆಗೂ ಶಾಲಾ-ಕಾಲೇಜು ತೆರೆಯುವಂತಿಲ್ಲ ಎಂದು ಕೂಡಾ ಈ ಸಂದರ್ಭದಲ್ಲೇ ತಿಳಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಮನರಂಜನಾ ಪಾರ್ಕ್ ತೆರೆಯಲು ಕೂಡಾ ಅನುಮತಿ ಇಲ್ಲ.