ಮುಂಬೈ, ಆ. 29 (DaijiworldNews/MB) : ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಲ್ಲೇ ಇರುವ ನಡುವೆ ಇದೀಗ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಮಾಧ್ಯಮವೊಂದರಲ್ಲಿ ಪ್ರಸಾರವಾಗಿರುವ ಆಸ್ಪತ್ರೆ ಸಿಬ್ಬಂದಿ ಹೇಳಿಕೆಯ ವಿಡಿಯೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಇದರಲ್ಲಿ ಆಸ್ಪತ್ರೆಯ ಸಿಬ್ಬಂದಿ, ಸುಶಾಂತ್ ಸಿಂಗ್ ಅವರ ಮೃತದೇಹವನ್ನು ಆಸ್ಪತ್ರೆಗೆ ತಂದಾಗ ಅವರ ಕಾಲು ಮುರಿದಿತ್ತು. ದೇಹದಲ್ಲಿ ಗಾಯದ ಗುರುತುಗಳಿತ್ತು. ಅದು ಕೊಲೆ ಎಂದು ವೈದ್ಯರು ಹೇಳುವುದುನ್ನು ನಾನು ಕೇಳಿದ್ದೇನೆ ಎಂದು ಹೇಳಿದ್ದಾರೆ.
ಇದನ್ನು ಟ್ವೀಟ್ ಮಾಡಿರುವ ಸುಶಾಂತ್ ಸಹೋದರಿ ಅಯ್ಯೋ ದೇವರೇ, ಈ ಸುದ್ದಿಯನ್ನು ಕೇಳುವಾಗ ನನ್ನ ಹೃದಯ ಜೋರಾಗಿ ಬಡಿಯುತ್ತದೆ. ನನ್ನ ಸಹೋದರಿಗೆ ಅವರು ಏನು ಮಾಡಿದರು. ದಯವಿಟ್ಟು ಅವರನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಸುಶಾಂತ್ ಸಾವು ಪ್ರಕರಣದ ಸಿಬಿಐ ತನಿಖೆ ನಡೆಸುತ್ತಿದ್ದು ಈ ಸಂಬಂಧ ಮಾಜಿ ಗೆಳತಿ ರೀಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೌಕಿ ಚಕ್ರವರ್ತಿಯನ್ನು ವಿಚಾರಣೆ ನಡೆಸಿದ್ದಾರೆ. ಇಡಿ ಮತ್ತು ಮಾದಕ ದ್ರವ್ಯ ನಿಗ್ರಹ ದಳ ಕೂಡಾ ರಿಯಾ ಚಕ್ರವರ್ತಿಯ ವಿಚಾರಣೆ ನಡೆಸಿವೆ.