ಬೆಂಗಳೂರು, ಆ. 29 (DaijiworldNews/MB) : ರಾಜ್ಯದಲ್ಲಿಂದು 8,324 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,27,076ಕ್ಕೆ ಏರಿಕೆಯಾಗಿದೆ. ಶನಿವಾರ 115 ಮಂದಿ ಸಾವನ್ನಪ್ಪಿದ್ದು ರಾಜ್ಯದಲ್ಲಿ ಈವರೆಗೆ 5,483 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇನ್ನು ರಾಜ್ಯದಲ್ಲಿ ಇಂದು 8,110 ಸೊಂಕಿತರು ಗುಣಮುಖರಾಗಿದ್ದು ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2,35,128ಕ್ಕೆ ಏರಿಕೆಯಾಗಿದೆ.
ಇಂದು ದೃಢಪಟ್ಟ 8,324 ಪ್ರಕರಣಗಳ ಪೈಕಿ 2,993 ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗಿದೆ. ಶಿವಮೊಗ್ಗದಲ್ಲಿ 333, ದಾವಣಗೆರೆಯಲ್ಲಿ 319, ಹಾಸನದಲ್ಲಿ 325, ಮೈಸೂರಿನಲ್ಲಿ 309, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 272, ಉಡುಪಿಯಲ್ಲಿ 172 ಕೊರೊನಾ ಪ್ರಕರಣಗಳು ದಾಖಲಾಗಿದೆ.
ಶನಿವಾರ ಒಂದೇದಿನ ಒಟ್ಟು 72,684 ಜನರ ಕೊರೊನಾ ತಪಾಸಣೆ ನಡೆಸಲಾಗಿದ್ದು ಈವರೆಗೆ 27,85,718 ಜನರ ಪರೀಕ್ಷೆ ನಡೆಸಲಾಗಿದೆ.