ನವದೆಹಲಿ, ಆ. 30(DaijiworldNews/HR): ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಸರಣಿಯ 68ನೇ ಕಾರ್ಯಕ್ರಮದಲ್ಲಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿ ಓಣಂ ಹಬ್ಬ ಇದೀಗ ವಿದೇಶಗಳಲ್ಲಿಯೂ ಆಚರಿಸುತ್ತಿದ್ದು, ಓಣಂನ ಓಜಸ್ಸನ್ನು ಎಲ್ಲೆಡೆ ಅನುಭವಿಸಬಹುದುದಾಗಿದ್ದು, ಇದೀಗ ಓಣಂ ಅಂತರಾಷ್ಟ್ರೀಯ ಉತ್ಸವವಾಗಿ ಬದಲಾಗಿದೆ ಎಂದು ತಿಳಿಸಿದರು.
ಓಣಂ ಹಬ್ಬದ ಸಂಭ್ರಮದಲ್ಲಿ ಜನರು ಒಂದಷ್ಟು ಹೊಸತನವನ್ನು ಮಾಡುತ್ತಾರೆ. ಹಾಗಾಗಿ ಕೊರೊನಾ ವೈರಸ್ ಇರುವ ಕಾರಣ ಎಚ್ಚರಿಕೆಯಿಂದ ಹಬ್ಬ ಆಚರಣೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಇನ್ನು ಸ್ವದೇಶಿ ನಿರ್ಮಿತ ವಸ್ತುಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದ್ದು, ಸ್ವಾವಲಂಬಿ ಭಾರತ ಕಟ್ಟಲು ದೇಶದ ಜನರು ಪಣತೊಡುತ್ತಿದ್ದಾರೆ. ಮನೆಗಳಲ್ಲೇ ಅಟಿಕೆ ತಯಾರು ಮಾಡಲಾಗುತ್ತಿದೆ ಮತ್ತು ಸಣ್ಣ ಉದ್ಯಮಗಳಿಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಯುವಕ ಪಾತ್ರ ದೊಡ್ಡದಾಗಿದೆ. ಸ್ವಾರ್ಟ್ಅಪ್ ಗಳಿಗೆ ಹೆಚ್ಚಿನ ಬೆಂಬಲ ನೀಡಬೇಕು. ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಕರೆ ನೀಡಿದರು.
ಹಾಗೆಯೇ ಮಕ್ಕಳು ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಬೇಕು. ವಿಜ್ಞಾನದ ಮೇಲಿನ ಆಸಕ್ತಿ ಸಂಶೋಧನೆಗೆ ಪ್ರೇರೆಪಿಸುತ್ತೆ. ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಅನೇಕ ಆಯಪ್ ಗಳಿವೆ ಹಾಗಾಗಿ ಶಿಕ್ಷಣ ಸಂಬಂಧಿಸದ ಆಯಪ್ ಗಳನ್ನು ಮಕ್ಕಳು ಉಪಯೋಗಪಡಿಸಿಕೊಳ್ಳಬೇಕು ಮತ್ತುಪೋಷಕರ ಮಕ್ಕಳ ಆಹಾರ, ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಮಕ್ಕಳು ಆರೋಗ್ಯವಾಗಿದ್ದರೆ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಮೊಹರಂ ಅಂಗವಾಗಿ ಪ್ರಧಾನಿ ಮೋದಿ ಇಮಾಮ್ ಹುಸೇನ್ ಅವರನ್ನು ಸ್ಮರಿಸಿ ಗೌರವ ಸಲ್ಲಿಸಿ, ಹುಸೇನ್ ಅವರು ಸಮಾನತೆ ಮತ್ತು ನ್ಯಾಯಕ್ಕೆ ಒತ್ತು ನೀಡಿದ್ದು ಇದು ಅನೇಕರಿಗೆ ಶಕ್ತಿ ನೀಡಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.