ಬೆಂಗಳೂರು, ಆ 30 (DaijiworldNews/PY): ಹಗಲು, ರಾತ್ರಿ ಎನ್ನದೇ ವ್ಹೀಲಿಂಗ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಾಕುತ್ತಿದ್ದ ಓರ್ವ ಯುವಕ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತ ಆರೋಪಿಯನ್ನು ಮತ್ತಿಕೆರೆ ನಿವಾಸಿ ಶೇಖ್ ಸಮೀರ್ ಎನ್ನಲಾಗಿದೆ.
ಈತ ಕೋಡಿಗೆ ಹಳ್ಳಿ ಜಂಕ್ಷನ್ ಬಳಿ ಹಗಲು, ರಾತ್ರಿ ಎನ್ನದೇ ವ್ಹೀಲಿಂಗ್ ಮಾಡುತ್ತಿದ್ದ. ಅಲ್ಲದೇ, ಈ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದು, ಇನ್ಟ್ಸಾಗ್ರಾಂನಲ್ಲಿ ಮೆಚ್ಚುಗೆ ಗಳಿಸುತ್ತಿದ್ದ.
ಪ್ರಾಣದ ಹಂಗು ತೊರೆದು ಕಾನೂನು ಬಾಹಿರವಾಗಿ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಈತನ ವಿರುದ್ದ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದ್ದು, ಆರೋಪಿಯನ್ನು ಹೆಬ್ಬಾಳ ಸಂಚಾರಿ ಠಾಣಾ ಇನ್ಸ್ಪೆಕ್ಟರ್ ಫೈರೋಜ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.