ನವದೆಹಲಿ, ಆ. 30 (DaijiworldNews/MB) : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆಗಸ್ಟ್ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಆಟಿಕೆ ತಯಾರಿಕೆಯತ್ತ ಗಮನ ಹರಿಸುವ ಬಗ್ಗೆ ತಿಳಿಸಿದ್ದಾರೆ.
ಭಾರತದ ಕೆಲವು ಭಾಗಗಳು ಆಟಿಕೆಗಳ ಕೇಂದ್ರಗಳಾಗಿ ಬೆಳೆಯುತ್ತಿವೆ. ಕರ್ನಾಟಕದ ರಾಮನಗರದ ಚನ್ನಪಟ್ಟಣ, ಆಂಧ್ರಪ್ರದೇಶದ ಕೃಷ್ಣದಲ್ಲಿನ ಕೊಂಡಪಲ್ಲಿ, ತಮಿಳುನಾಡಿನ ತಂಜಾವೂರು, ಅಸ್ಸಾಂನ ಧುಬ್ರಿ, ಯುಪಿಯಲ್ಲಿ ವಾರಣಾಸಿ ಹೀಗೆ ಅನೇಕ ಸ್ಥಳಗಳು ನಾವು ಆಟಿಕೆಗಳಿಗೆ ಪ್ರಸಿದ್ದವಾಗಿರುವುದನ್ನು ನಾವು ಗಮನಿಸಬಹುದು. ನಾನು ಲಾಕ್ಡೌನ್ ಸಂದರ್ಭದಲ್ಲಿ ಮಕ್ಕಳ ಬಗ್ಗೆನ ಯೋಚಿಸಿದೆ. ಭಾರತವನ್ನು ಜಾಗತಿಕ ಆಟಿಕೆಗಳ ತಯಾರಿಕೆ ಕೇಂದ್ರವಾಗಿ ರೂಪಿಸುವ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.
ಭಾರತವನ್ನು ಜಾಗತಿಕ ಆಟಿಕೆಗಳ ತಯಾರಿಕೆ ಕೇಂದ್ರವಾಗಿ ಹೊರಹೊಮ್ಮಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಟಿಕೆಗಳ ಮೇಲೆ ಗಮನ ಹರಿಸಲಾಗುತ್ತಿದೆ. ಆಡುವಾಗ ಕಲಿಯುವುದು, ಆಟಿಕೆಗಳು ತಯಾರಿಸುವುದು ಇತ್ಯಾದಿ ಪಠ್ಯಕ್ರಮದ ಒಂದು ಭಾಗವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ಜಾಗತಿಕ ಆಟಿಕೆ ಉದ್ಯಮದಲ್ಲಿ ಭಾರತದ ಪಾಲು ಸದ್ಯ 7 ಲಕ್ಷ ಕೋಟಿ ಆಗಿದ್ದು ಇದು ಬಹಳ ಕಡಿಮೆಯಾಗಿದೆ. ಈಗ ನಾವು ಭಾರತವನ್ನು ಜಾಗತಿಕ ಆಟಿಕೆ ತಯಾರಿಕೆ ಕೇಂದ್ರವಾಗಿ ಮಾರ್ಪಡು ಮಾಡಲು ಒಗ್ಗೂಡಿ ಕಾರ್ಯ ನಿರ್ವಹಿಸಬೇಕಾಗಿದೆ. ಆಟಿಕೆ ತಯಾರಿಕೆ ಸಣ್ಣ ಉದ್ಯಮಗಳಿಗೆ ಬಲ ತುಂಬಬೇಕಾಗಿದೆ ಎಂದು ಹೇಳಿದರು.