ಲಕ್ನೋ, ಆ 30 (DaijiworldNews/PY): ಚಲಿಸುತ್ತಿದ್ದ ಬಸ್ನಲ್ಲಿ ಮಹಿಳೆಯೋರ್ವರ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅತ್ಯಾಚಾರವೆಸಗಿದ ಆರೋಪಿಯನ್ನು ಬರ್ಹೈಚಿ ಜಿಲ್ಲೆಯ ನಿವಾಸಿ ರವಿ ಎನ್ನಲಾಗಿದೆ.
ಲಕ್ನೋದಿಂದ ದೆಹಲಿಗೆ ತೆರಳುತ್ತಿದ್ದ ಡಿಲಕ್ಸ್ ಡಬಲ್ ಡಕ್ಕರ್ ಬಸ್ನಲ್ಲಿ ಮಹಿಳೆ ನವದೆಹಲಿಗೆ ವಾಪಾಸ್ಸಾಗುತ್ತಿದ್ದಳು. ಚಾಲಕನ ಕ್ಯಾಬಿನ್ನ ಹಿಂಭಾಗದಲ್ಲೇ ಕುಳಿತಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಕೂಡಲೇ ಮಹಿಳೆ ಮಥುರಾದ ಮಂತ್ ಟೋಲ್ ಗೇಟ್ ಬಳಿ ಬಸ್ ಆಗಮಿಸುತ್ತಿದ್ದಂತೆ ಬಸ್ನಲ್ಲಿದ್ದ ಎಚ್ಚರಿಕೆ ಗಂಟೆ ಬಾರಿಸಿದ್ದಾಳೆ. ಅಲ್ಲದೇ, 112 ಸಹಾಯವಾಣಿಗೂ ಕರೆ ಮಾಡಿದ್ದಾಳೆ. ಈ ವೇಳೆ ಆಕೆ ಬಸ್ ಕ್ಲೀನರ್ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.
ತಕ್ಷಣವೇ ಮಥುರಾದ ಮಂತ್ ಟೋಲ್ ಗೇಟ್ ಬಳಿ ಬಂದ ಪೊಲೀಸರು ಬಸ್ ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಹಿಳೆ ಹಾಗೂ ಆರೋಪಿ ರವಿ ಎಂಬಾತನನ್ನು ಪೊಲೀಸರು ಬಸ್ನಿಂದ ಕೆಳಕ್ಕಿಳಿಸಿದ್ದಾರೆ. ಬಳಿಕ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ನಂತರ ಮಹಿಳೆಯನ್ನು ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ನಿವಾಸಕ್ಕೆ ಕಳುಹಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರವಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಸ್ ಕ್ಲೀನರ್ ಹಾಗೂ ಕಂಡೆಕ್ಟರ್ ವಿರುದ್ದ ಮಂತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.