ನವದೆಹಲಿ, ಆ. 30(DaijiworldNews/HR): ಖಲಿಸ್ತಾನ್ ಧ್ವಜವನ್ನು ಪಂಜಾಬ್ನ ಮೊಗಾದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಮೇಲ್ಛಾವಣಿಯಲ್ಲಿ ಹಾರಿಸಿ, ಭಾರತೀಯ ಧ್ವಜವನ್ನು ಅಪವಿತ್ರಗೊಳಿಸಿದ್ದರು ಎಂಬ ಆರೋಪ ಮೇಲೆ ದೆಹಲಿ ಪೊಲೀಸ್ ವಿಶೇಷ ಪಡೆ ಖಲಿಸ್ತಾನ್ ಜಿಂದಾಬಾದ್ ಫೋರ್ಸ್ ಎಂಬ ನಿಷೇಧಿತ ಸಂಘಟನೆಯ ಇಬ್ಬರು ಸದಸ್ಯರನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಇಂಗರ್ಜೀತ್ ಗಿಲ್ ಮತ್ತು ಜಸ್ಪಾಲ್ ಸಿಂಗ್ ಪಂಜಾಬಿನ ಮೊಗಾ ಪಟ್ಟಣದ ಮೂಲದವರಾಗಿದ್ದು ಅವರು ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ನೊಂದಿಗೆ ಸಂಪರ್ಕ ಹೊಂದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮೂರನೇ ಆರೋಪಿ ಆಕಾಶ್ದೀಪ್ ಸಿಂಗ್ ಅವರನ್ನು ಈಗಾಗಲೇ ಮೊಗಾ ಪೊಲೀಸರು ಬಂಧಿಸಿದ್ದಾರೆ. ಧ್ವಜವನ್ನು ಹಾರಿಸುವ ವೀಡಿಯೊವನ್ನು ಮಾಡಲು ಆಕಾಶ್ದೀಪ್ಗೆ ಸೂಚನೆ ನೀಡಲಾಯಿತು ಮತ್ತು ಇತರ ಇಬ್ಬರು ಖಲಿಸ್ತಾನ್ ಧ್ವಜವನ್ನು ಡಿಸಿ ಕಚೇರಿಯ ಮೇಲ್ಛಾವಣಿಯಲ್ಲಿ ಹಾರಿಸಿದ್ದರು.