ಶ್ರೀನಗರ, ಆ. 30(DaijiworldNews/HR): ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿರುವುದನ್ನು ವಿರೋಧಿಸಿ ರಾಜ್ಯದ 6 ಪಕ್ಷಗಳು ಒಟ್ಟಾಗಿದ್ದನ್ನು ಸ್ವಾಗತಿಸಿದ್ದ ಪಾಕಿಸ್ತಾನಕ್ಕೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾ ನಾವು ಯಾರ ಕೈಗೊಂಬೆಯೂ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈ ಹಿಂದೆ ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳನ್ನು ಪಾಕಿಸ್ತಾನ ನಿಂದಿಸುತ್ತಿತ್ತು. ಆದರೆ ಈಗ್ಯಾಕೆ ಏಕಾಏಕಿ ಇಷ್ಟಪಡಲು ಪ್ರಾರಂಭಿಸಿದೆ ಎಂದು ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಇದೇ ಸಂಧರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರ ಹೇಳಿಕೆಗೆ ಪ್ರತಿಕ್ರಿಯೆಗೆ ನೀಡಿದ ಅಬ್ದುಲ್ಲಾ, ನಾವು ಯಾರಿಗೂ ಕೂಡ ಕೈಗೊಂಬೆಗಳಲ್ಲ. ನಾವು ಜಮ್ಮು-ಕಾಶ್ಮೀರದ ಜನತೆಗೆ ಮಾತ್ರ ಸಹಾಯಮಾಡುವವರು ಅವರ ಒಳಿತಿಗಾಗಿ ಮಾತ್ರ ದುಡಿಯುತ್ತೇವೆ ಎಂದು ತಿಳಿಸಿದ್ದಾರೆ.
ಇತ್ತೀಚೆ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್, ಎನ್ ಸಿ ಸೇರಿದಂತೆ ಒಟ್ಟು 6 ಪಕ್ಷಗಳು ಒಟ್ಟಾದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಾಕ್ ವಿದೇಶಾಂಗ ಸಚಿವ ಖುರೇಷಿ, ಈ ಬೆಳವಣಗೆ ಸಾಧಾರಣವಾದುದ್ದಲ್ಲ, ಬದಲಾಗಿ ಮಹತ್ವದ್ದಾಗಿದೆ ಎಂದು ಹೇಳಿದ್ದರು.