ನವದೆಹಲಿ, ಆ. 30 (DaijiworldNews/MB) : ಪ್ರಧಾನಿ ನರೇಂದ್ರ ಮೋದಿಯವರು ಜೆಇಇ- ನೀಟ್ ಪರೀಕ್ಷಾ ಪೆ ಚರ್ಚಾ ಬದಲು ಆಟಿಕೆಯ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟೀಕೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಈ ಸಂದರ್ಭದಲ್ಲಿ ಜೆಇಇ-ನೀಟ್ ಪರೀಕ್ಷಾ ಆಕಾಂಕ್ಷಿಗಳು ಪಿಎಂ ಪರೀಕ್ಷಾ ಪೆ ಚರ್ಚಾ ನಡೆಸುತ್ತಾರೆ ಎಂದು ಬಯಸಿದ್ದರು, ಆದರೆ ಪ್ರಧಾನಿ ಅವರು ಆಟಿಕೆಯ ಬಗ್ಗೆ ಚರ್ಚೆ (ಖಿಲೋನಾ ಪೆ ಚರ್ಚಾ) ನಡೆಸಿದ್ದಾರೆ'' ಎಂದು ಲೇವಡಿ ಮಾಡಿದ್ದಾರೆ.
ಜಾಗತಿಕ ಆಟಿಕೆ ಉದ್ಯಮದಲ್ಲಿ ಭಾರತದ ಪಾಲು ಸದ್ಯ 7 ಲಕ್ಷ ಕೋಟಿ ಆಗಿದ್ದು ಇದು ಬಹಳ ಕಡಿಮೆಯಾಗಿದೆ. ಈಗ ನಾವು ಭಾರತವನ್ನು ಜಾಗತಿಕ ಆಟಿಕೆ ತಯಾರಿಕೆ ಕೇಂದ್ರವಾಗಿ ಮಾರ್ಪಡು ಮಾಡಲು ಒಗ್ಗೂಡಿ ಕಾರ್ಯ ನಿರ್ವಹಿಸಬೇಕಾಗಿದೆ. ಆಟಿಕೆ ತಯಾರಿಕೆ ಸಣ್ಣ ಉದ್ಯಮಗಳಿಗೆ ಬಲ ತುಂಬಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದರು.