ನಾಗ್ಪುರ, ಆ. 30(DaijiworldNews/HR): ನಾವು ಪ್ರಕೃತಿಯ ಒಂದು ಭಾಗವಾಗಿ ಅದನ್ನು ಪೋಷಿಸಬೇಕು, ಹೊರತು ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವಂತೆ ಪ್ರಕೃತಿ ವಿನಾಶ ಮಾಡಿದರೆ ನಾವು ಬದುಕುಳಿಯುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ವರ್ಚುವಲ್ ಮೋಡ್ ಮೂಲಕ ಆಯೋಜಿಸಿದ 'ಪರಿಸರ ದಿನ' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಕೃತಿಯನ್ನು ತಮ್ಮ ಜೀವನದ ಒಂದು ಪ್ರಮುಖ ಭಾಗವಾಗಿ ಪೋಷಿಸಿದ ನಮ್ಮ ಪೂರ್ವಜರು ಅನುಸರಿಸುವ ಜೀವನ ವಿಧಾನವನ್ನು ಒತ್ತಿ ತಿಳಿಸಿದ್ದಾರೆ.
ಪ್ರಕೃತಿ ತಮ್ಮ ಬಳಕೆಗಾಗಿ ಇರುವುದು ಎಂದು ನಂಬಿರುವ ಜನರು ಯಾವುದೇ ಜವಾಬ್ದಾರಿ ಇಲ್ಲದೇ ಪರಿಸರ ನಾಶ ಮಾಡುತ್ತಿದ್ದಾರೆ. ಇದೇ ರೀತಿಯಾಗಿ ಮುಂದುವರಿದರೆ, ನಾವು ಅಥವಾ ಈ ಜಗತ್ತು ಉಳಿಯುವುದಿಲ್ಲ.
ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಪರಿಸರ ದಿನ ಎಂಬ ಪರಿಕಲ್ಪನೆಯು ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ನಮ್ಮ ಜೀವನ ವಿಧಾನವು ಎಲ್ಲರನ್ನೂ ಗೌರವಿಸುತ್ತಿತ್ತು, ಆದರೆ ನಾವು ವಿಶ್ವದ ಜೀವನ ವಿಧಾನದಿಂದ ದಾರಿ ತಪ್ಪಿದ್ದೇವೆ. ಆದ್ದರಿಂದ, ಇಂದು ನಾವು ಪರಿಸರ ದಿನವನ್ನು ಆಚರಿಸುವ ಮೂಲಕ ಇವೆಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು
ನಾಗ ಪಂಚಮಿ, ಗೋವರ್ಧನ್ ಪೂಜಾ, ತುಳಸಿ ಪೂಜೆಯನ್ನು ಉಲ್ಲೇಖಿಸಿದ ಭಾಗವತ್, ಈ ಎಲ್ಲ ಸಂಸ್ಕಾರಗಳನ್ನು ಆಚರಿಸಬೇಕು ಮತ್ತು ಪುನರ್ಯೌವನಗೊಳಿಸಬೇಕು, ಮತ್ತು ಹೊಸ ಪೀಳಿಗೆಯವರು ಕೂಡ ನಾವು ಪ್ರಕೃತಿಯನ್ನು ಪೋಷಿಸಬೇಕು ಮತ್ತು ಅದನ್ನು ನಾಶಮಾಡಬಾರದು ಎಂಬುದನ್ನು ಅರಿತುಕೊಳ್ಳಬೇಕು ಎಂದರು.