ಮುಂಬೈ, ಆ. 31 (DaijiworldNews/MB) : ಬಾಲಿವುಡ್ ಡ್ರಗ್ ಮಾಫಿಯಾದ ಬಗ್ಗೆ ಟ್ವೀಟ್ ಮಾಡಿರುವ ನಟಿ ಕಂಗನಾ ರಣಾವತ್ ಅವರಿಗೆ ಸೂಕ್ತ ಭದ್ರತೆ ಒದಗಿಸಿ ಎಂದು ಮಹಾರಾಷ್ಟ್ರ ರಾಜ್ಯ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬಿಜೆಪಿ ಆಗ್ರಹಿಸಿದೆ.
ಈ ಸಂಬಂಧ ರಾಜ್ಯ ಬಿಜೆಪಿ ಹಿರಿಯ ನಾಯಕ ರಾಮ್ ಕದಂ ಕಳವಳ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು ಕಂಗಾನ ಹೇಳಿಕೆ ನೀಡಿದ 100 ಗಂಟೆಗಳು ಕಳೆದಿದ್ದರೂ, ಕೂಡಾ ಮಹಾ ಸರ್ಕಾರ ಯಾವುದೇ ಭದ್ರತೆ ನೀಡಿಲ್ಲ ಯಾಕೆ ಎಂದು ಪ್ರಶ್ನಿಸಿರುವ ಬಿಜೆಪಿ, ಆಕೆಗೆ ಭದ್ರತೆ ನೀಡದಿರುವುದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದಾರೆ.
ಬಾಲಿವುಡ್ ಡ್ರಗ್ ಮಾಫಿಯಾವನ್ನು ಕೊನೆಗಾಣಿಸುವುದು ಅತೀ ಮುಖ್ಯ. ಜನರು ಬಾಲಿವುಡ್ ನಟ, ನಟಿಯರು ಹಾಗೂ ರಾಜಕೀಯ ವ್ಯಕ್ತಿಗಳನ್ನು ತಮ್ಮ ಆದರ್ಶವಾಗಿ ಕಾಣುತ್ತಾರೆ. ಹೀಗಿರುವಾಗ ಬಾಲಿವುಡ್ನಲ್ಲಿರುವ ಡ್ರಗ್ ಮಾಫಿಯಾವನ್ನು ಕೊನೆಗಾಣಿಸುವುದು ಅತೀ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಬಾಲಿವುಡ್ನ ಓರ್ಬ ನಟ ಕಂಗನಾ ಅವರಿಗೆ ಡ್ರಗ್ಸ್ ನೀಡಿ ಚಿತ್ರ ಹಿಂಸೆ ನೀಡುತ್ತಿದ್ದರು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.